ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿಯ ಚಿತ್ತಾರ ಹೇಗಿದೆ ನೋಡಿ!
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ 7ನೇ ಪುಣ್ಯಸ್ಮರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಲಾವಿದ ಮನು ಅವರು ತೆಂಗಿನ ಗರಿಗಳಿಂದ ನಿರ್ಮಿಸಿದ ಶಿವಕುಮಾರ ಸ್ವಾಮೀಜಿಗಳ ಭವ್ಯ ಕಲಾಕೃತಿ ಭಕ್ತರ ಗಮನ ಸೆಳೆದಿದೆ. ತ್ರಿವಿಧ ದಾಸೋಹಿಗಳ ಪುಣ್ಯಸ್ಮರಣೆಯ ಈ ವಿಶೇಷ ಆಚರಣೆಗೆ ಈ ಪರಿಸರ ಸ್ನೇಹಿ ಕಲಾಕೃತಿ ಹೊಸ ಮೆರಗು ನೀಡಿದೆ.
ತುಮಕೂರು, ಜನವರಿ 21: ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಜರುಗುತ್ತಿದೆ. ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಮನು ಅವರು ತೆಂಗಿನ ಗರಿಗಳಿಂದ ರಚಿಸಿದ ಶಿವಕುಮಾರ ಸ್ವಾಮೀಜಿಗಳ ಸುಂದರ ಕಲಾಕೃತಿಯು ಗಮನ ಸೆಳೆದಿದೆ. ಈ ಕಲಾಕೃತಿ, ಸಂಪೂರ್ಣವಾಗಿ ತೆಂಗಿನ ಗರಿಗಳನ್ನು ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಎಂಟು ತೆಂಗಿನ ಗರಿಗಳು ಬಳಕೆಯಾಗಿವೆ. ಕಲಾವಿದ ಮನು ಮತ್ತು ಅವರ ಟೀಮ್ ಗಜಸೇನಾ ಕಲಾವಿದರು ಸತತ 48 ಗಂಟೆಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ರೂಪಿಸಿದ್ದಾರೆ.
