ಸಿದ್ದರಾಮಯ್ಯ ಸೈಟುಗಳನ್ನು ವಾಪಸ್ಸು ಕೊಟ್ಟಾಗಲೇ ಅಕ್ರಮ ನಡೆದಿದ್ದು ಸಾಬೀತಾಗಿದೆ: ಕುಮಾರಸ್ವಾಮಿ

|

Updated on: Oct 18, 2024 | 2:56 PM

ಮುಡಾ ಹಗರಣದಲ್ಲಿ ನ್ಯಾಯಯುತ ತನಿಖೆ ಆಗಲಾರದು ಎಂದು ಕುಮಾರಸ್ವಾಮಿ ಹೇಳಿದರು. ಹೇಗೆ ಆಗಲು ಸಾಧ್ಯ? ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲಿದ್ದು ಅವರೆಲ್ಲ ಸರ್ಕಾರ ಅಥವಾ ಸಿದ್ದರಾಮಯ್ಯ ಪರ ಇರುತ್ತಾರೆ, ಅವರಿಂದ ನಿಷ್ಪಕ್ಷವಾದ ತನಿಖೆ ನಿರೀಕ್ಷಿಸುವುದು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಡ್ಯ: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮುಡಾ ಪ್ರಕರಣವನ್ನು ಮತ್ತೊಮ್ಮೆ ಕೆದಕಿದರು. ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸರ್ಕಾರಿ ಜಮೀನನ್ನು ಲಪಟಾಯಿಸಿ ಬೇರೆ ಸೈಟುಗಳನ್ನು ವಾಪಸ್ಸು ಕೊಟ್ಟಿದ್ದಾರೆ. ಸೈಟುಗಳನ್ನು ವಾಪಸ್ಸು ಮಾಡುವ ಮೂಲಕ ಅವುಗಳನ್ನು ಅಕ್ರಮವಾಗು ಪಡೆದಿದ್ದು ಅನ್ನೋ ಸಂಗತಿ ಸಾಬೀತಾಗಿದೆ. ಸಿದ್ದರಾಮಯ್ಯ ಪರ ವಾದಿಸಲು ದೆಹಲಿಯಿಂದ ಖ್ಯಾತ ವಕೀಲರು ಬಂದರೂ ಮುಖ್ಯಮಂತ್ರಿಯ ಅಕ್ರಮ ಮುಚ್ಚಿಡಲಾಗಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ: ಹೆಚ್ ಡಿ ಕುಮಾರಸ್ವಾಮಿ

Follow us on