ಸಿದ್ದರಾಮಯ್ಯ ರಥಯಾತ್ರೆ ಮಾಡಲಿ, ಬಿಜೆಪಿಯವರೂ ಮಾಡಲಿ, ನಮಗೇನೂ ಅಭ್ಯಂತರವಿಲ್ಲ: ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2022 | 10:56 AM

ಸಿದ್ದರಾಮಯ್ಯ ಕೂಡ ರಥಯಾತ್ರೆ ಮಾಡುವುದಾದರೆ ಮಾಡಲಿ, ಬಿಜೆಪಿಯವರೂ ಮಾಡಲಿ ಅದರಿಂದ ನಮಗೇನೂ ಅಭ್ಯಂತರವಿಲ್ಲ ಎಂದರು.

ಬೆಂಗಳೂರು: ಎಡೆಬಿಡದ ಮಳೆ ಸುರಿದ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆಯನ್ನು ಮುಂದೂಡಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಶುಕ್ರವಾರ ಬೆಂಗಳೂರಲ್ಲಿ ಹೇಳಿದರು. ಇನ್ನೊಂದು ವಾರದಲ್ಲಿ ರಥಯಾತ್ರೆಗೆ ವಾಹನಗಳು ಸಿದ್ಧವಾಗಲಿವೆ, ಅದಾದ ಕೂಡಲೇ ರಥಯಾತ್ರೆ ಆರಂಭಿಸಲಿದ್ದೇವೆ ಎಂದ ಅವರು ಸಿದ್ದರಾಮಯ್ಯ (Siddaramaiah) ಕೂಡ ರಥಯಾತ್ರೆ ಮಾಡುವುದಾದರೆ ಮಾಡಲಿ, ಬಿಜೆಪಿಯವರೂ (BJP) ಮಾಡಲಿ ಅದರಿಂದ ನಮಗೇನೂ ಅಭ್ಯಂತರವಿಲ್ಲ ಎಂದರು.