ಬಯ್ಯುತ್ತೇನೆ ಎಂಬ ಕಾರಣಕ್ಕೆ ವಿಜಯೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ: ಬಸನಗೌಡ ಯತ್ನಾಳ್

Updated on: Jun 20, 2025 | 4:53 PM

ಚಕ್ರವರ್ತಿ ಸೂಲಿಬೆಲೆ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಮಾತಾಡುತ್ತಾರೆ, ಮೊಘಲರು ಮತ್ತು ಬೇರೆ ರಾಜರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಿದ್ದರ ಬಗ್ಗೆ ಮಾತಾಡುತ್ತಾರೆ, ಲವ್ ಜಿಹಾದ್ ಯಾಕಾಗುತ್ತಿದೆ ಅಂತ ವಿವರಿಸುತ್ತಾರೆ, ಹಾಗಾಗೇ ಅವರ ಮಾತಿನ ಮೇಲೆ ಅಂಕುಶ ಸಾಧಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಯತ್ನಾಳ್ ಹೇಳಿದರು.

ವಿಜಯಪುರ, ಜೂನ್ 20: ಬೆಂಗಳೂರಲ್ಲಿ ಜೂನ್ 4ರಂದು ಕಾಲ್ತುಳಿತದ ದುರ್ಘಟನೆ ನಡೆದು 11 ಜನ ಸಾಯುವಂತಾಗಿದ್ದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (Siddaramaiah and DK Shivakumar) ಅವರೇ ಕಾರಣ, ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಕ್ರಿಕೆಟ್ ಆಟಗಾರರನ್ನು ಭೇಟಿ ಮಾಡಿಸುವುವ ಉಮ್ಮೇದಿ ಅವರಿಗಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದ, ಅವರು ಕೇವಲ ವಿಧಾನ ಸೌಧ ಪ್ರದೇಶಕ್ಕೆ ಮಾತ್ರ ಮುಖ್ಯಮಂತ್ರಿಯೇ? ದುರಂತಕ್ಕೆ ನಾನು ಕಾರಣನಲ್ಲ ಎಂಬ ಹೇಳಿಕೆ ನಾಚಿಕೆಗೇಡಿನದು ಎಂದು ಯತ್ನಾಳ್ ಹೇಳಿದರು. ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುವ ನೈತಿಕತೆಯನ್ನು ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ, ವಿಜಯೇಂದ್ರ ಪ್ರತಿಭಟನೆ ಮುಂದಾದರೆ ಸಿಎಂ ಮತ್ತು ಡಿಸಿಎಂ; ನಿಮ್ಮ ತಂದೆಯ ಪೋಕ್ಸೋ ಕೇಸ್, ನಿನ್ನ ಫೋರ್ಜರಿ ಕೇಸ್ ಓಪನ್ ಮಾಡುತ್ತೇವೆ ಎಂದು ಹೆದರಿಸಿ ಸುಮ್ಮನಾಗಿಸುತ್ತಾರೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:  ಸೋಮಶೇಖರ್ ಮತ್ತು ಹೆಬ್ಬಾರ್​ರನ್ನು ರಕ್ಷಿಸುವಲ್ಲಿ ತಂದೆ ಮಗನ ಜೋಡಿ ವಿಫಲವಾಗಿದೆ: ಬಸನಗೌಡ ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ