ಸಿದ್ದರಾಮಯ್ಯ ವಿರುದ್ಧ ನಿನ್ನೆ ಕಿಡಿಕಾರಿದ ಬಸನಗೌಡ ಯತ್ನಾಳ್ ಇಂದು ಸಾಫ್ಟ್ ಆದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2022 | 2:14 PM

ಆದರೆ ಸಿದ್ದರಾಮಯ್ಯನವರಿಗೆ ಮಾಡಿಕೊಳ್ಳುವ ವಿನಂತಿಯೇನೆಂದರೆ ಅವರು ಒಂದೇ ಕೋಮಿನ ಪರವಹಿಸಿಕೊಂಡು ಮಾತಾಡಬಾರದು, ಯಾಕೆಂದರೆ ಅವರಿಗೆ ಎಲ್ಲ ಸಮುದಾಯದವರು ವೋಟು ಹಾಕಿರುತ್ತಾರೆ ಎಂದು ಹೇಳಿದರು.

ವಿಜಯಪುರ: ಮಂಗಳವಾರ ಸಿದ್ದರಾಮಯ್ಯನವರ (Siddaramaiah) ವಿರುದ್ಧ ವೀರಾವೇಶದಿಂದ ಕೂಗಾಡಿದ್ದ ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basangouda Patil Yatnal) ಬುಧವಾರ ಬಹಳ ಸೌಮ್ಯವಾಗಿ ಮಾತಾಡಿದರು. ವಿಜಯಪುರದಲ್ಲಿ ಸುದ್ದಿಗಾರರು ಸಿದ್ದರಾಮಯ್ಯನರವರು ವಿಧಾನ ಸಭೆ ಚಲೋ ಚಳುವಳಿ ಮಾಡಲಿದ್ದಾರೆ ಅಂತ ಹೇಳಿದಾಗ, ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ, ಆದರೆ ಸಿದ್ದರಾಮಯ್ಯನವರಿಗೆ ಮಾಡಿಕೊಳ್ಳುವ ವಿನಂತಿಯೇನೆಂದರೆ ಅವರು ಒಂದೇ ಕೋಮಿನ ಪರವಹಿಸಿಕೊಂಡು ಮಾತಾಡಬಾರದು, ಯಾಕೆಂದರೆ ಅವರಿಗೆ ಎಲ್ಲ ಸಮುದಾಯದವರು ವೋಟು ಹಾಕಿರುತ್ತಾರೆ ಎಂದು ಹೇಳಿದರು. ನಮ್ಮ ನಡುವೆ ಪರಸ್ಪರ ಗೌರವಾದರಗಳಿವೆ ಎಂದು ಯತ್ನಾಳ್ ಒತ್ತಿ ಹೇಳಿದರು.