ದೆಹಲಿ ತಲುಪಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಒಂದೇ ಕಾರಲ್ಲಿ ಸುರ್ಜೆವಾಲಾ ಮನೆಗೆ ಹೋದರು

|

Updated on: May 28, 2024 | 7:19 PM

ಇಂದು ಬೆಳಗ್ಗೆ ಶಿವಕುಮಾರ್ ದೆಹಲಿಗೆ ತೆರಳುವ ಮೊದಲು ಬೆಂಗಳೂರಲ್ಲಿ ಹೇಳಿದ ಹಾಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡುವುದು ಬಹಳ ಕಷ್ಟ, ಯಾಕೆಂದರೆ 7 ಸ್ಥಾನಳಿಗೆ 300 ಆಕಾಂಕ್ಷಿಗಳಿದ್ದಾರಂತೆ. ಸಿದ್ದರಾಮಯ್ಯ ಇದ್ದಲ್ಲಿ ಸಚಿವ ಭೈರತಿ ಸುರೇಶ್ ಇರಲೇಬೇಕು ಮಾರಾಯ್ರೇ. ಇಲ್ನೋಡಿ ಅವರು ಸಹ ಮತ್ತೊಂದು ಕಾರಲ್ಲಿ ಬಂದು ಸುರ್ಜೆವಾಲಾ ಮನೆ ಪ್ರವೇಶಿಸುತ್ತಿದ್ದಾರೆ.

ದೆಹಲಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿ ತಲುಪಿದ್ದಾರೆ ಮತ್ತು ಅವರು ಒಂದೇ ಕಾರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಅವರ ಮನೆಗೆ ಆಗಮಿಸುತ್ತಿರುವುದನ್ನು ಇಲ್ಲಿ ನೋಡಬಹುದು. ಎಂದಿನಂತೆ ಸಿದ್ದರಾಮಯ್ಯ ಕಾರಿನ ಮುಂಭಾಗದಲ್ಲಿ ಕುಳಿತಿದ್ದರೆ ಶಿವಕುಮಾರ್ ಹಿಂಬದಿಯಲ್ಲಿ ಆಸೀನರಾಗಿದ್ದರು. ಜೂನ್ 13 ರಂದು ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಅವರು ದೆಹಲಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ಶಿವಕುಮಾರ್ ದೆಹಲಿಗೆ ತೆರಳುವ ಮೊದಲು ಬೆಂಗಳೂರಲ್ಲಿ ಹೇಳಿದ ಹಾಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡುವುದು ಬಹಳ ಕಷ್ಟ, ಯಾಕೆಂದರೆ 7 ಸ್ಥಾನಳಿಗೆ 300 ಆಕಾಂಕ್ಷಿಗಳಿದ್ದಾರಂತೆ. ಬಿಡಿ ಅದು ಅವರ ತಲೆಬಿಸಿ, ನಾವ್ಯಾಕೆ ಮಂಡೆ ಬಿಸಿಮಾಡಿಕೊಳ್ಳೋಣ. ಸಿದ್ದರಾಮಯ್ಯ ಇದ್ದಲ್ಲಿ ಸಚಿವ ಭೈರತಿ ಸುರೇಶ್ ಇರಲೇಬೇಕು ಮಾರಾಯ್ರೇ. ಇಲ್ನೋಡಿ ಅವರು ಸಹ ಮತ್ತೊಂದು ಕಾರಲ್ಲಿ ಬಂದು ಸುರ್ಜೆವಾಲಾ ಮನೆ ಪ್ರವೇಶಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕುಮಾರಸ್ವಾಮಿಯವರು ರಾಕೇಶ್ ಸಿದ್ದರಾಮಯ್ಯ ಎಳೆತಂದಿದ್ದು ಮೂರ್ಖತನ: ಸಿದ್ದರಾಮಯ್ಯ