ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು!

Updated on: Mar 25, 2026 | 3:05 PM

ವಿಧಾನಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಕೆಲ ಸ್ವಾರಸ್ಯಕರ ಪ್ರಸಂಗಗಳು ಜರುಗಿವೆ. ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಶಾಲ್ ಹಾಕುತ್ತಿರುವ ಬಗ್ಗೆ ಚರ್ಚೆಯಾಗಿದ್ದು, ಬಿಜೆಪಿ ಶಾಸಕ ಸುನೀಲ್​ಕುಮಾರ್​ ಮಧ್ಯಪ್ರವೇಶಿಸಿ, ನೀವು ಶಾಲು ಹಾಕಿದ‌ಮೇಲೆ ಮುಖ್ಯಮಂತ್ರಿ ಆಗಿದ್ದೀರಿ. ಅದಕ್ಕೆ‌ ಡಿಕೆ ಕೂಡ ಶಾಲು ಹಾಕ್ತಿದ್ದಾರೆಂದು ಸಿದ್ದರಾಮಯ್ಯನವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಟವೆಲ್ ಹಾಕುತ್ತಿದ್ದೆ. ಅದು ಯಾವಾಗಲೂ ಬಿದ್ದು ಹೋಗುತ್ತಿತ್ತು. ಅವತ್ತಿನಿಂದ ನಾನು ಶಾಲು ಹಾಕ್ತಿರೋದು, ಬೇರೆ ಅರ್ಥ ಬೇಡ. ನಾನು ದೇವರಿದ್ದಾನೆ ಎನ್ನುಉದನ್ನು ಒಪ್ಪುತ್ತೇನೆ. ಆದರೆ ದೇವಸ್ಥಾನದಲ್ಲಿಲ್ಲ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಯ್ಯ, ಈ ಬಗ್ಗೆ ಬಸವಣ್ಣ ಅವರು ಹೇಳಿದ್ರು ಎಂದು ಬಸವಣ್ಣನ ವಚನದ ಮೂಲಕ, ಸುನೀಲ್ ಕುಮಾರ್ ಹೆ ಟಾಂಗ್ ಕೊಟ್ಟರು.

ಬೆಂಗಳೂರು, (ಮಾರ್ಚ್ 25): ವಿಧಾನಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಕೆಲ ಸ್ವಾರಸ್ಯಕರ ಪ್ರಸಂಗಗಳು ಜರುಗಿವೆ. ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಶಾಲ್ ಹಾಕುತ್ತಿರುವ ಬಗ್ಗೆ ಚರ್ಚೆಯಾಗಿದ್ದು, ಬಿಜೆಪಿ ಶಾಸಕ ಸುನೀಲ್​ಕುಮಾರ್​ ಮಧ್ಯಪ್ರವೇಶಿಸಿ, ನೀವು ಶಾಲು ಹಾಕಿದ‌ಮೇಲೆ ಮುಖ್ಯಮಂತ್ರಿ ಆಗಿದ್ದೀರಿ. ಅದಕ್ಕೆ‌ ಡಿಕೆ ಕೂಡ ಶಾಲು ಹಾಕ್ತಿದ್ದಾರೆಂದು ಸಿದ್ದರಾಮಯ್ಯನವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಟವೆಲ್ ಹಾಕುತ್ತಿದ್ದೆ. ಅದು ಯಾವಾಗಲೂ ಬಿದ್ದು ಹೋಗುತ್ತಿತ್ತು. ಅವತ್ತಿನಿಂದ ನಾನು ಶಾಲು ಹಾಕ್ತಿರೋದು, ಬೇರೆ ಅರ್ಥ ಬೇಡ. ನಾನು ದೇವರಿದ್ದಾನೆ ಎನ್ನುಉದನ್ನು ಒಪ್ಪುತ್ತೇನೆ. ಆದರೆ ದೇವಸ್ಥಾನದಲ್ಲಿಲ್ಲ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಯ್ಯ, ಈ ಬಗ್ಗೆ ಬಸವಣ್ಣ ಅವರು ಹೇಳಿದ್ರು ಎಂದು ಬಸವಣ್ಣನ ವಚನದ ಮೂಲಕ, ಸುನೀಲ್ ಕುಮಾರ್ ಗೆ ಟಾಂಗ್ ಕೊಟ್ಟರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 25, 2026 02:39 PM
Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More