ಯುವ ಕಲಾವಿದ ಕೆಂಚಪ್ಪ ಬಡಿಗೇರ್ ವೇದಿಕೆ ಮೇಲೆ ಕೇವಲ 3 ನಿಮಿಷಗಳಲ್ಲಿ ತಮ್ಮ ಭಾವಚಿತ್ರ ರಚಿಸಿದ್ದು ಕಂಡು ಸಿದ್ದರಾಮಯ್ಯ ದಂಗಾದರು
ಕೆಂಚಪ್ಪ ಬಡಿಗೇರ್ ಪ್ರತಿಭೆ ನೋಡಿ ದಂಗಾದ ಸಿದ್ದರಾಮಯ್ಯ ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಬೆನ್ನುತಟ್ಟಿ ಶಹಾಭಾಸ್ ಎಂದರಲ್ಲದೆ, ಹೂವಿನ ಹಾರ ಹಾಕಿ ಮತ್ತು ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಕೆಂಚಪ್ಪ ರಚಿಸಿದ ಪೋರ್ಟೇರ್ಟ್ ಮತ್ತು ಕಲಾವಿದನೊಂದಿಗೆ ಕೆಮೆರಾಗಳಿಗೆ ಪೋಸ್ ನೀಡಿದರು. ಯುವ ಕಲಾವಿದ ಬಹಳ ಸಂತೋಷಪಟ್ಟು ಅಭಿಮಾನದಿಂದ ಬೀಗಿರುತ್ತಾರೆ ಅಂತ ಬೇರೆ ಹೇಳಬೇಕಿಲ್ಲ
ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಾಡಿನ ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಇಟ್ಟುಕೊಂಡಿರುವ ಸದಭಿರುಚಿಯ ವ್ಯಕ್ತಿ. ವಿಜಯಪುರದಲ್ಲಿ ಅವರು ಇಂದು ಅಖಿಲ ಭಾರತ 70ನೇ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಕೆಂಚಪ್ಪ ಬಡಿಗೇರ (Kechappa Badiger) ಹೆಸರಿನ ಕಲಾವಿದರೊಬ್ಬರು ವೇದಿಕೆಯ ಮೇಲೆಯೇ ಕ್ಯಾನ್ವಾಸಿನ ಮೇಲೆ ಮುಖ್ಯಮಂತ್ರಿಯ ಚಿತ್ರವನ್ನು (portrait) ಕೇವಲ 3 ನಿಮಿಷಗಳಲ್ಲಿ ರಚಿಸಿ ಸಿದ್ದರಾಮಯ್ಯ ಜೊತೆ ವೇದಿಕೆ ಮೇಲಿದ್ದ ಎಲ್ಲ ಗಣ್ಯರು ಮತ್ತು ನೆರೆದಿದ್ದ ಜನರ ಮನಸೂರೆಗೊಂಡು ಅಭಿನಂದನೆಗೆ ಪಾತ್ರರಾದರು. ಕೆಂಚಪ್ಪ ಬಡಿಗೇರ್ ಪ್ರತಿಭೆ ನೋಡಿ ದಂಗಾದ ಸಿದ್ದರಾಮಯ್ಯ ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಬೆನ್ನುತಟ್ಟಿ ಶಹಾಭಾಸ್ ಎಂದರಲ್ಲದೆ, ಹೂವಿನ ಹಾರ ಹಾಕಿ ಮತ್ತು ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಕೆಂಚಪ್ಪ ರಚಿಸಿದ ಪೋರ್ಟೇರ್ಟ್ ಮತ್ತು ಕಲಾವಿದನೊಂದಿಗೆ ಕೆಮೆರಾಗಳಿಗೆ ಪೋಸ್ ನೀಡಿದರು. ಯುವ ಕಲಾವಿದ ಬಹಳ ಸಂತೋಷಪಟ್ಟು ಅಭಿಮಾನದಿಂದ ಬೀಗಿರುತ್ತಾರೆ ಅಂತ ಬೇರೆ ಹೇಳಬೇಕಿಲ್ಲ. ವೇದಿಕೆ ಮೇಲೆ ಸಚಿವರಾದ ಎಂಬಿ ಪಾಟೀಲ್, ಕೆಎನ್ ರಾಜಣ್ಣ, ಶಿವಾನಂದ ಪಾಟೀಲ್ ಮೊದಲಾದವರನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ