ಸಿದ್ದರಾಮಯ್ಯ 2009 ರಲ್ಲಿ ಸೋನಿಯಾ ಗಾಂಧಿಯನ್ನು ಬ್ಲ್ಯಾಕ್ಮೇಲ್ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ: ಚಲವಾದಿ ನಾರಾಯಣಸ್ವಾಮಿ
ಕಾಂಗ್ರೆಸ್ ಹೈಕಮಾಂಡ್ ಮೊದಲಿನ ಹಾಗೆ ಶಕ್ತ ಮತ್ತು ಸಮರ್ಥವಾಗಿಲ್ಲ, ದುರ್ಬಲಗೊಂಡಿದೆ ಎಂದು ಚಲವಾದಿ ಹೇಳಿದರು.
ಬೆಂಗಳೂರು: ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು ಈಗ ಬಿಜೆಪಿಯಿಂದ ಸಂಸದರಾಗಿರುವ ಚಲವಾದಿ ನಾರಾಯಣಸ್ವಾಮಿ (Chalavadi Narayanaswamy) ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಿದ್ದರಾಮಯ್ಯ ಒಬ್ಬ ಬ್ಲ್ಯಾಕ್ ಮೇಲ್ ರಾಜಕಾರಣಿ (blackmailer) ಎಂದು ಜರಿದರು. 2009 ರಲ್ಲಿ ಅವರು ತನ್ನನ್ನು ವಿರೋಧ ಪಕ್ಷದ ನಾಯಕನಾಗಿ ನೇಮಿಸದಿದ್ದರೆ ತನ್ನ ದಾರಿ ತಾನು ನೋಡಿಕೊಳ್ಳುವುದಾಗಿ ಆಗ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ (Sonia Gandhi) ಅವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ಹೇಳಿದರು. ವಿಧಿಯಿಲ್ಲದೆ ಸೋನಿಯಾ ಗಾಂಧಿ ಆಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿ ಅವರ ಸ್ಥಾನವನ್ನು ಸಿದ್ದರಾಮಯ್ಯ ನೀಡಿದ್ದರು. ಈಗಲೂ ಅವರು ದೆಹಲಿಯಲ್ಲಿ ಕೂತು ಅದನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲಿನ ಹಾಗೆ ಶಕ್ತ ಮತ್ತು ಸಮರ್ಥವಾಗಿಲ್ಲ, ದುರ್ಬಲಗೊಂಡಿದೆ ಎಂದು ಚಲವಾದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ