ಕಲಾಪದಲ್ಲಿ ಭಾಗವಹಿಸಲು ಆಗಮಿಸಿದ ಸಿದ್ದರಾಮಯ್ಯ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡದೆ ಸಿಡುಕಿದರು!
ಹಿಂದೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಹಾಗೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಸಹ ನಿನ್ನೆ ರಾತ್ರಿ ಧರಣಿ ನಡೆಸಿದರು. ಅವರು ನಡೆಸಿದ ಪ್ರತಿಭಟನೆ ಕುರಿತು ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಪಡೆಯುವುದು ಪತ್ರಕರ್ತರ ಉದ್ದೇಶವಾಗಿತ್ತು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಸ್ಯಪ್ರಜ್ಞೆ ಎಲ್ಲರಿಗೂ ಗೊತ್ತಿದೆ. ಕೆಲವು ಸಲ ಅವರು ಸಿಡುಕುತ್ತಲೇ ಜೋಕ್ ಕಟ್ ಮಾಡುತ್ತಾರೆ. ಅವರನ್ನು ಮಾಧ್ಯಮದವರು ಇಕ್ಕಟ್ಟಿಗೆ ಸಿಲುಕಿಸಿದಾಗ ಸಿಡುಕುವುದು ಕೋಪದಿಂದ ಪ್ರತಿಕ್ರಿಯೆ ನೀಡುವುದನ್ನು ಕನ್ನಡಿಗರು ನೋಡಿದ್ದಾರೆ. ಇವತ್ತು ಬೆಳಗ್ಗೆ ಅವರು ವಿಧಾನಸಭಾ ಅಧಿವೇಶನದ ಇವತ್ತಿನ ಕಾರ್ಯಕಲಾಪದಲ್ಲಿ ಭಾಗವಹಿಸಲು ಆಗಮಿಸಿದಾಗ ವಿಧಾನಸಭಾ ಅವರಣದಲ್ಲಿದ್ದ ಮಾಧ್ಯಮ ಪ್ರತಿನಿದಿಗಳು ಅವರನ್ನು ಮಾತಿಗೆಳೆದು ಬೈಟ್ ಪಡೆಯುವ ಪ್ರಯತ್ನ ಮಾಡಿದರು. ತಮ್ಮ ಜೊತೆಯಲ್ಲಿದ್ದವರಿಗೆ ಏನನ್ನೋ ಹೇಳುತ್ತಿದ್ದ ಸಿದ್ದರಾಮಯ್ಯರಿಗೆ ಪತ್ರಕರ್ತರು, ಸಿಎಂ ಸರ್ ಸಿಎಂ ಸರ್ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ ಎನ್ನುತ್ತಾ ಗಮನ ಸೆಳೆಯಲು ಪ್ರಯತ್ನಿಸಿದಾಗ, ಮುಖ ಸಿಂಡರಿಸಿದ ಅವರು ಕೋಪದಲ್ಲೇ ಏನೋ ಹೇಳುತ್ತಾರೆ, ಅದು ಕೇಳಿಸುವುದಿಲ್ಲ, ಅದರೆ ಅವರ ಜೊತೆಗಿದ್ದವರು ಕೇಳಿಸಿಕೊಂಡು ನಗಲಾರಂಭಿಸುತ್ತಾರೆ, ಅವರೊಂದಿಗೆ ಮುಖ್ಯಮಂತ್ರಿಯೂ ನಗುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ, ಭಜನೆ!