Karnataka Assembly Polls; ಸೋಲಿನ ಭೀತಿಯಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ರಕ್ಷಣೆಗಾಗಿ ಮೊಮ್ಮಗನನ್ನು ಕರೆತಂದಿದ್ದಾರೆ: ಪ್ರತಾಪ್ ಸಿಂಹ, ಸಂಸದ
ಅಭಿವೃದ್ಧಿ ಅಂದರೇನು ಅನ್ನೋದನ್ನ ವರುಣಾ ಕ್ಷೇತ್ರದಲ್ಲಿ ಗೆದ್ದ ಮೇಲೆ ಸೋಮಣ್ಣ ಸಾಹೇಬರು ತೋರಿಸಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು: ವರುಣಾದಲ್ಲಿ ತನಗ್ಯಾರು ಪ್ರತಿಸ್ಪರ್ಧಿ ಎಂದು ಹಮ್ಮಿನಿಂದ ಬೀಗುತ್ತಿದ್ದ ಸಿದ್ದರಾಮಯ್ಯ (Siddaramaiah) ಅವರೆದುರು ಭಾರತೀಯ ಜನತಾ ಪಕ್ಷ ವಿ ಸೋಮಣ್ಣ (V Somanna) ಅವರಿಗೆ ಟಿಕೆಟ್ ನೀಡಿದ ಬಳಿಕ ಕಂಗೆಟ್ಟು ತಮ್ಮ ರಕ್ಷಣೆಗಾಗಿ ಮೊಮ್ಮಗನನ್ನು (grandson) ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು. ಯಾವುದೇ ದೂರದೃಷ್ಟಿಯಿಲ್ಲದೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮೆರೆದ ಸಿದ್ದರಾಮಯ್ಯ ಈಗ ಪಶ್ಚಾತ್ತಾಪಡುತ್ತಿದ್ದಾರೆ, ಅಭಿವೃದ್ಧಿ ಅಂದರೇನು ಅನ್ನೋದನ್ನ ವರುಣಾ ಕ್ಷೇತ್ರದಲ್ಲಿ ಗೆದ್ದ ಮೇಲೆ ಸೋಮಣ್ಣ ಸಾಹೇಬರು ತೋರಿಸಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ