ನನ್ನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒಂದು ರೂ. ಯನ್ನೂ ನೀಡಿಲ್ಲ: ಸುರೇಶ್ ಗೌಡ

|

Updated on: Jan 10, 2025 | 2:35 PM

ಕೇಂದ್ರ ಸಚಿವ ಸೋಮಣ್ಣ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮನಸಾರೆ ಹೊಗಳಿದ ಸುರೇಶ್ ಗೌಡ, ಗೂಳೂರು ಕೆರೆಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸಚಿವರನ್ನು ಕೋರಿದಾಗ ಅವರು ಈ ಭಾಗದ ಕೆರೆಗಳ ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕಾಗಿ ₹ 50 ಕೋಟಿ ಅನುದಾನವನ್ನು ಜಲಸಂಪನ್ಮೂಲ ಇಲಾಖೆಯಿಂದ ಬಿಡುಗಡೆ ಮಾಡಿದ್ದಾರೆ ಎಂದರು.

ತುಮಕೂರು: ಕೇಂದ್ರ ಸಚಿವ ವಿ ಸೋಮಣ್ಣ ಅವರು ಸಮ್ಮುಖದಲ್ಲಿ ಆಯೋಜಿಸಿದ ಕುಂದುಕೊರತೆಗಳ ಸಭೆಯಲ್ಲಿ ಮಾತಾಡಿದ ತುಮಕೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ರಾಜ್ಯ ಸರ್ಕಾರ ಬೇರೆ ಪಕ್ಷಗಳ ಶಾಸಕರ ಪಾಲಿಗೆ ಇದ್ದೂ ಸತ್ತಂತಾಗಿದೆ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕಳೆದ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಹತ್ತು ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿಲ್ಲ,  ತಾನು ಕೇವಲ ಪೇಪರಲ್ಲಿ ಮಾತ್ರ ಶಾಸಕನಾಗಿದ್ದೇನೆ, ಮುಖ್ಯಮಂತ್ರಿಯವರು ತನ್ನ ಕ್ಷೇತ್ರಕ್ಕೆ ಎರಡು ಸಲ ಬಂದಿದ್ದರು, ಶಾಲಾ ಕಟ್ಟಡವೊಂದರ ಶಂಕುಸ್ಥಾಪನೆ ನೆರವೇರಿಸಿ, ಆ ಶಾಲೆಗಾಗಿ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ₹ 1.40 ಕೋಟಿ ಅನುದಾನವನ್ನೂ ಹಿಂಪಡೆದು ಹೋದರು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಆಗಿರುವ ಅನುದಾನದಿಂದ ಕೊಡುತ್ತೇವೆ ಅಂತ ಪರಮೇಶ್ವರ್ ಹೇಳಿದ್ದರು, ಅದರೆ ಇದುವರೆಗೆ ನಯಾ ಪೈಸೆ ಸಿಕ್ಕಿಲ್ಲ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿಟಿ ರವಿ ಕೇಸ್​ ಬೆಳೆಸುವುದು ಬೇಡವೆಂದು ಸಿಎಂ, ಗೃಹ ಸಚಿವರು ಹೇಳಿಲ್ವಾ? ವಿ ಸೋಮಣ್ಣ ಹೊಸ ಬಾಂಬ್

Published on: Jan 10, 2025 02:34 PM