ಏಪ್ರಿಲ್ ಒಳಗಾಗಿ ಸಿದ್ದರಾಮಯ್ಯ ಸರ್ಕಾರ ಪತನವಾಗುತ್ತದೆ; ಎಂಪಿ ರೇಣುಕಾಚಾರ್ಯ ಭವಿಷ್ಯವಾಣಿ!
ಪತ್ರಕರ್ತರು ರೇಣುಕಾಚಾರ್ಯ ಅವರನ್ನು ಮಾತಿನಲ್ಲಿ ಸಿಕ್ಕಿಸುತ್ತಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದಿದ್ದಂತೆ, ಅವನ ಹಾಗೆಯೇ ಮಾಜಿ ಶಾಸಕ ಸೋಲೊಪ್ಪಿಕೊಳ್ಳದೆ ತಮ್ಮ ಮಾತು ಮುಂದುವರಿಸುತ್ತಾ, ಬಿಜೆಪಿ ನಾಯಕರು ಕಮಿಟಿ ಮೀಟಿಂಗ್ ಮುಗಿಸಿ ಊಟಕ್ಕೆ ಹೋದರೆ ಅದು ತಪ್ಪಲ್ಲ, ಅದು ಲಂಚ್, ಅದರೆ ಕಾಂಗ್ರೆಸ್ ನಾಯಕರು ಮಾಡುತ್ತಿರೋದು ಡಿನ್ನರ್ ಪಾರ್ಟಿ ಅಲ್ಲ, ಡಿನ್ನರ್ ಪೊಲಿಟಿಕ್ಸ್ ಎನ್ನುತ್ತಾರೆ!
ದಾವಣಗೆರೆ: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರಿಗೆ ಮಾತಾಡುವ ಹಪಾಹಪಿ, ಒಮ್ಮೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಮತ್ತು ಅದರ ನಾಯಕರ ವಿರುದ್ಧ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಏಪ್ರಿಲ್ ತಿಂಗಳೊಳಗಾಗಿ ಸಿದ್ದರಾಮಯ್ಯ ಸರ್ಕಾರ ಬಿದ್ದುಹೋಗುತ್ತದೆ, ಸಿದ್ದರಾಮಯ್ಯ ತಮ್ಮ ರಾಜಕೀಯ ಬದುಕಿನ ಕೊನೆಯ ಬಜೆಟ್ ಮಂಡಿಸಿದ ಬಳಿಕ ಸರ್ಕಾರ ಗಂಟುಮೂಟೆ ಕಟ್ಟಲಿದೆ ಎಂದು ಹೇಳಿ ತಮ್ಮ ಮಾತಿಗೆ ತೂಕ ತಂದುಕೊಳ್ಳಲು ಅವರು ಸೂರ್ಯ ಚಂದ್ರರನ್ನು ಎಳೆದು ತರುತ್ತಾರೆ! ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ತಾನು ಹೇಳೋದು ಕೂಡ ಅಷ್ಟೇ ಸತ್ಯ ಅನ್ನೋದು ಅವರ ಮಾತಿನ ತಾತ್ಪರ್ಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ, ರಾಜ್ಯಾಧ್ಯಕ್ಷನ ಬದಲಾವಣೆ ಇಲ್ಲ: ರೇಣುಕಾಚಾರ್ಯ