ಕ್ರಿಕೆಟ್ ಪಂದ್ಯ ನೋಡುತ್ತಾ ಸಮೋಸಾ ತಿನ್ನಲು ಸಿದ್ದರಾಮಯ್ಯಗೆ ಸಮಯವಿದೆ, ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ಇಲ್ಲ: ಆರ್ ಅಶೋಕ
ನೀತಿ ಆಯೋಗದ ಸಭೆಯಲ್ಲಿ ಎಲ್ಲ ರಾಜ್ಯಗಳು ಮುಖ್ಯಮಂತ್ರಿಗಳು ಪಾಲ್ಗೊಂಡು ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿಗೆ ಬೇಕಿರುವ ಹಣಕಾಸಿನ ನೆರವಿನ ಬಗ್ಗೆ ಮಾತಾಡುತ್ತಾರೆ, ತಮಿಳುನಾಡು ಮುಖ್ಯಮಂತ್ರಿಯೂ ಸಭೆಗೆ ಹೋಗಿದ್ದಾರೆ, ಅವರಿಗೆಲ್ಲ ತಮ್ಮ ರಾಜ್ಯಗಳ ಅಭಿವೃದ್ಧಿ ಬೇಕಿದೆ, ನಮ್ಮ ಮುಖ್ಯಮಂತ್ರಿಗೆ ಮಾತ್ರ ಬೇಕಿಲ್ಲ, ಇದು ಅವರು ತಮ್ಮನ್ನು ಆರಿಸಿದ ಜನತೆ ಮಾಡಿರುವ ದ್ರೋಹವಲ್ಲದೆ ಮತ್ತೇನೂ ಅಲ್ಲ ಎಂದು ಅಶೋಕ ಹೇಳಿದರು.
ಬೆಂಗಳೂರು, ಮೇ 26: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಂದಿಲ್ಲವೆಂದು ಹೇಳುವ ಅಧಿಕಾರವನ್ನು ನೀತಿ ಆಯೋಗದ ಸಭೆಗೆ ಗೈರಾಗುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಕಳೆದುಕೊಂಡಿದ್ದಾರೆ, ಇನ್ನು ಅವರು ಹೇಳುವ ಮಾತುಗಳನ್ನು ಜನ ನಂಬುವ ಅವಶ್ಯಕತೆಯಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ಸಿದ್ದರಾಮಯ್ಯನವರಿಗೆ ವಿಜಯನಗರದಲ್ಲಿ ಸಮಾವೇಶ ನಡೆಸಲು ಸಮಯವಿದೆ, ರಾಜಸ್ತಾನದಲ್ಲಿ ಅಯೋಜಿಸಿದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ಸಮಯವಿದೆ, ಐಪಿಎಲ್ ಮ್ಯಾಚ್ ನೋಡುತ್ತಾ ಪಾಪ್ಕಾರ್ನ್ ಮತ್ತು ಸಮೋಸಾ ತಿನ್ನಲು ಸಮಯವಿದೆ, ದೆಹಲಿಗೆ ಹೋಗಿ ಸೋನಿಯ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾಗಲು 2-3 ದಿನ ಕಾಯುವಷ್ಟು ಸಮಯವಿದೆ, ಆದರೆ ಪ್ರಧಾನ ಮಂತ್ರಿಯವರು ಕರೆದ ನೀತಿ ಆಯೋಗದ ಸಬೆಯಲ್ಲಿ ಪಾಲ್ಗೊಳ್ಳಲು ಇವರಿಗೆ ಸಮಯವಿಲ್ಲ ಎಂದು ಗೇಲಿ ಮಾಡಿದರು.
ಇದನ್ನೂ ಓದಿ: ಗ್ರೇಟರ್ಗೆ ಕ್ವಾರ್ಟರ್ ಎನ್ನುವ ವಿಪಕ್ಷ ನಾಯಕ ಅಶೋಕ ಬುದ್ಧಿವಂತರು ಅನ್ಕೊಂಡಿದ್ದೆ: ಲಕ್ಷ್ಮಿ ಹೆಬ್ಬಾಳ್ಕರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ