ಸರ್ಕಾರಿ ನೌಕರರ ಮೂಲವೇತನವನ್ನು ಶೇ. 17ರಿಂದ ಶೇ. 27.5 ರಷ್ಟು ಹೆಚ್ಚಿಸುವ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Mar 16, 2024 | 1:04 PM

ಚುನಾವಣೆ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಕೇಳಿದಕ್ಕೆ ಸಿಡುಕಿದ ಸಿದ್ದರಾಮಯ್ಯ, ವಿಷಯ ಅದಲ್ಲ, ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಮಾದರಿ ನೀತಿ ಸಂಹಿತೆ ಜಾರಿಗೊಂಡರೆ ಇದನ್ನು ಘೋಷಿಸಲಾಗಲ್ಲ, ಆರ್ಥಿಕ ಇಲಾಖೆ ಸರ್ಕಾರದ ಶಿಫಾರಸ್ಸುಗಳನ್ನು ಕೂಡಲೇ ಮಾನ್ಯ ಮಾಡಲ್ಲ, ಅದಕ್ಕೆ ಸಮಯ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಮೊನ್ನೆಯಷ್ಟೇ ರಾಜ್ಯ ಸರ್ಕಾರಿ ನೌಕರರ (government servants) ತುಟ್ಟಿಭತ್ಯೆ ಹೆಚ್ಚು ಮಾಡಿ ಆದೇಶ ಹೊರಡಿಸಿದ್ದ ಸಿದ್ದರಾಮಯ್ಯ ಸರ್ಕಾರ (Siddaramaiah government) ಈಗ ಮತ್ತೊಂದು ಸಿಹಿಸುದ್ದಿಯನ್ನು ನೌಕರರಿಗೆ ನೀಡಿದೆ. ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಮುಖ್ಯಮಂತ್ರಿಯವರು, ಏಳನೇ ವೇತನ ಆಯೋಗ (7th Pay Commission) ನೀಡಿರುವ ವರದಿಯು ಸರ್ಕಾರಿ ನೌಕರರ ಮೂಲವೇತನವನ್ನು ಶೇಕಡ 17ರಿಂದ ಶೇಕಡ 27.5 ರಷ್ಟು ಹೆಚ್ಚಿಸುವ ಶಿಫಾರಸ್ಸು ಮಾಡಿದೆ. ಆಯೋಗದ ಶಿಫಾರಸ್ಸುಗಳನ್ನು ಹಣಕಾಸು ಇಲಾಖೆಗೆ ಕಳಿಸಿ ಅದು ನೀಡುವ ಸಲಹೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಚುನಾವಣೆ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಕೇಳಿದಕ್ಕೆ ಸಿಡುಕಿದ ಸಿದ್ದರಾಮಯ್ಯ, ವಿಷಯ ಅದಲ್ಲ, ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಮಾದರಿ ನೀತಿ ಸಂಹಿತೆ ಜಾರಿಗೊಂಡರೆ ಇದನ್ನು ಘೋಷಿಸಲಾಗಲ್ಲ, ಆರ್ಥಿಕ ಇಲಾಖೆ ಸರ್ಕಾರದ ಶಿಫಾರಸ್ಸುಗಳನ್ನು ಕೂಡಲೇ ಮಾನ್ಯ ಮಾಡಲ್ಲ, ಅದಕ್ಕೆ ಸಮಯ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ತಾತ್ಕಾಲಿಕವಾಗಿ ಘೋಷಿಸಿರುವ ಶೇಕಡ 17ರಷ್ಟು ಹೆಚ್ಚಳ ಮುಂದುವರಿಯುತ್ತಾ ಅಂತ ಪತ್ರಕರ್ತರೊಬ್ಬರು ಕೇಳಿದಾಗ ಮತ್ತೊಮ್ಮೆ ಸಿಡುಕಿದ ಮುಖ್ಯಮಂತ್ರಿಯವರು, ಅದು ಸರಳವಾಗಿ ಅರ್ಥವಾಗುವ ವಿಷಯ ಅಲ್ವೇನಯ್ಯ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ: ದೇವೇಂದ್ರ ಫಡ್ನವಿಸ್