ಉಪಚುನಾವಣೆ ಸಮರಕ್ಕೆ ಮೊದಲು ಜಿಮ್ನಲ್ಲಿ ದೇಹವನ್ನು ಹುರಿ ಮಾಡಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಿರಿಯ ಕಾಂಗ್ರೆಸ್ ಲೀಡರ್ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುತ್ತಾರೆ ಅಂತ ಬಹಳ ಜನಕ್ಕೆ ಗೊತ್ತಿದೆ. ಅವರೇ ಒಮ್ಮೆ ಹೇಳಿಕೊಂಡಂತೆ ಸುಮಾರು 16 ವರ್ಷಗಳ ಹಿಂದೆಯೇ ಅವರ ರಕ್ತನಾಳದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ.
ಟ್ರ್ಯಾಕ್ ಸೂಟ್ ಹಾಕಿಕೊಂಡು ತಲೆ ಮೇಲೊಂದು ಕ್ಯಾಪ್ ಮತ್ತು ಮುಖಕ್ಕೊಂದು ಮಾಸ್ಕ್ ಧರಿಸಿ ಜಿಮ್ನಲ್ಲಿ ಮೈ ದಣಿಸುತ್ತಿರುವವರು ಯಾರು ಅಂತ ಗೊತ್ತಾಯ್ತಾ? ಇದು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಬೆಳಗ್ಗೆ ಕಂಡುಬಂದ ದೃಶ್ಯ. ನಿಮ್ಮ ಊಹೆ ಸರಿ ಅವರ ನಿಸ್ಸಂದೇಹವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ. ಹಿರಿಯ ಕಾಂಗ್ರೆಸ್ ಲೀಡರ್ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುತ್ತಾರೆ ಅಂತ ಬಹಳ ಜನಕ್ಕೆ ಗೊತ್ತಿದೆ. ಅವರೇ ಒಮ್ಮೆ ಹೇಳಿಕೊಂಡಂತೆ ಸುಮಾರು 16 ವರ್ಷಗಳ ಹಿಂದೆಯೇ ಅವರ ರಕ್ತನಾಳದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಕಳೆದ ವರ್ಷ ಅವರು ಹದಿನೈದು ವರ್ಷಗಳ ಹಿಂದೆ ಹಾಕಿದ್ದ ಸ್ಟೆಂಟ್ ಅನ್ನು ರಿಪ್ಲೇಸ್ ಮಾಡಿಸಿದ್ದರು.
ಅದಾದ ಮೇಲೆ ಒಮ್ಮೆ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಎಮ್ ಟಿ ಆರ್ ಹೋಟಲ್ಗೆ ತಮ್ಮ ಸಚಿವ ಸಂಪುಟದ ಕೆಲ ಸದಸ್ಯರು ಮತ್ತು ಹಿಂಬಾಲಕರೊಂದಿಗೆ ತಿಂಡಿ ತಿನ್ನಲು ಬಂದಿದ್ದರು. ಎಲ್ಲರಂತೆ ಅವರಿಗೂ ಬಿಸಿಬೇಳೆ ಬಾತ್ ಮತ್ತು ಮಸಾಲೆ ದೋಸೆ ಜೊತೆ ತುಪ್ಪ ನೀಡಲಾಗಿತ್ತು. ಅದರೆ ಸಿದ್ದರಾಮಯ್ಯನವರು ತುಪ್ಪ ತಿನ್ನಲಿಲ್ಲ. ಯಾಕೆ ಅಂತ ಅಲ್ಲಿ ನೆರೆದಿದ್ದ ಮಾಧ್ಯಮದವರು ಕೇಳಿದಾಗ, ‘ತುಪ್ಪ ತಿಂದ್ರೆ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ,’ ಎಂದು ಹೇಳಿದ್ದರು.
ಇದನ್ನೆಲ್ಲ ಹೇಳುವ ಹಿಂದಿನ ಉದ್ದೇಶ ಇಷ್ಟೇ, ಸಿದ್ದಾರಾಮಯ್ಯನವರಿಗೆ ಆರೋಗ್ಯದ ಬಗ್ಗೆ ಬಹಳ ಕಾಳಜಿಯಿದೆ. ರಾಜ್ಯದ ಎರಡು ವಿಧಾನ ಸಭಾ ಕ್ಷೇತ್ರಗಳಾದ-ಹಾನಗಲ್ ಮತ್ತು ಸಿಂಧಗಿಗೆ ಉಪಚುನಾವಣೆ ನಡೆಯುತ್ತ್ತಿರುವುದು ನಿಮಗೆ ಗೊತ್ತಿದೆ. ಸಿಂಧಗಿಗೆ ಪ್ರಚಾರಕ್ಕೆ ತೆರಳುವ ಮುನ್ನ ಅವರು ಹುಬ್ಬಳ್ಳಿಯ ಹೋಟೆಲೊಂದರಲ್ಲಿ ತಂಗಿದ್ದರು.
ಈ ಚುನಾವಣೆಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಸತ್ವ ಪರೀಕ್ಷೆ, ಎರಡೂ ಕ್ಷೇತ್ರಗಳು ಉತ್ತರ ಕರ್ನಾಟಕದ ಭಾಗವಾಗಿರುವುರಿಂದ ಅವರು ತಮ್ಮ ಜನಪ್ರಿಯತೆಯನ್ನು ಸಾಬೀತು ಮಾಡಬೇಕಿದೆ.
ಹಾಗೆಯೇ ಕಾಂಗ್ರೆಸ್ ಸಹ ಉಪಚುನಾವಣೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಹೊಸ ವಾರ್ಮ್ಅಪ್ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್