ತಮ್ಮ ಪವರ್ ಶಿವಕುಮಾರ್​ಗೆ ತೋರಿಸಲು ಸಿದ್ದರಾಮಯ್ಯ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ: ಅಶೋಕ

Updated on: Jul 30, 2025 | 5:38 PM

ಇದಕ್ಕೂ ಮೊದಲು ಸಿದ್ದರಾಮಯ್ಯ ತಾವು ನಡೆಸಿದ ಎಲ್ಲ ಸಭೆಗಳಿಗೆ ಶಿವಕುಮಾರ್ ಅವರನ್ನು ಆಹ್ವಾನಿಸಿದ್ದರು. ಈಗ ಶಾಸಕರ ಜೊತೆ ನಡೆಸುವ ಸಭೆಗೆ ಅವರನ್ನು ಕರೆದಿಲ್ಲ, ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರನ್ನು ತನ್ನ ಕಡೆ ಎಳೆದುಕೊಳ್ಳಬೇಕು, ಶಿವಕುಮಾರ್ ಯಾವ ಶಾಸಕನ ಬೆಂಬಲವೂ ಸಿಗಬಾರದು ಅನ್ನೋದು ಸಿದ್ದರಾಮಯ್ಯನವರ ಹುನ್ನಾರ ಎಂದು ಅಶೋಕ ಹೇಳಿದರು.

ಬೆಂಗಳೂರು, ಜುಲೈ 30: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬುದ್ಧಿ ಕಲಿಸಬೇಕು, ಮುಖ್ಯಮಂತ್ರಿಯಾಗಿ ತನ್ನ ಪವರ್ ಏನು ಅನ್ನೋದನ್ನು ತೋರಿಸಬೇಕು ಅಂತ ಸಿದ್ದರಾಮಯ್ಯನವರು ಶಾಸಕರ ಸಭೆಗೆ ಅವರನ್ನು ಕರೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು. ಪ್ರತ್ಯೇಕ ಸಭೆಗಳನ್ನು (separate meetings) ಮಾಡೋದು ಕಾಂಗ್ರೆಸ್ ನಾಯಕರಿಗೆ ಫ್ಯಾಶನ್ ಆಗಿಬಿಟ್ಟಿದೆ, ಮೊದಲಿಗೆ ರಂದೀಪ್ ಸುರ್ಜೇವಾಲಾ ಅವರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು, ಸಿದ್ದರಾಮಯ್ಯ ಈಗ ನಡೆಸುತ್ತಿದ್ದಾರೆ, ಶಿವಕುಮಾರ್ ಕೂಡ ನಡೆಸಿದ್ದರು ಎಂದು ಅಶೋಕ ಹೇಳಿದರು. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಳಯ ಆಗಲಿದೆ ಅಂತ ಅವರ ಮಂತ್ರಿಗಳು ಮತ್ತು ಶಾಸಕರೇ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಎಂದ ಸಿದ್ದರಾಮಯ್ಯ: ಹೊಟ್ಟೆಯುರಿ ಎಂದು ಅಶೋಕ್ ತಿರುಗೇಟು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ