ವಿಧಾನಸಭೆಯಲ್ಲಿ ಮೆಜಾರಿಟಿ ಇರೋ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ, ವಿ ಪ ಸದಸ್ಯ

|

Updated on: Jul 01, 2024 | 11:18 AM

ವಿಧಾನಸಭೆಯಲ್ಲಿ ಮೆಜಾರಿಟಿ ಇರುವ ಕಾರಣ ನಂಬರ್ ಗೇಮ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ. ಆದರೆ ಅವರು ಜನ ಮತ್ತು ತಮ್ಮದೇ ಪಕ್ಷದ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ, ಅವರ ತವರು ಜಿಲ್ಲೆ ಮೈಸೂರಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಹಣದ ದುರುಪಯೋಗ ಅವ್ಯಾಹತವಾಗಿ ನಡೆದಿದೆ ಎಂದು ಹೇಳಿದರು. ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಇಂಧನ ಬೆಲೆಯೇರಿಕೆಯು ಬೇರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವುದಕ್ಕೆ ಪರವಾನಗಿ ಕೊಟ್ಟಂತೆ ಎನ್ನುತ್ತಿದ್ದವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಇಂಧನ ಮೇಲಿನ ಸೆಸ್ ಅನ್ನು ಎರಡು ಬಾರಿ ಹೆಚ್ಚಿಸಿದ್ದಾರೆ ಎಂದರು. ಅವರು ಮುಖ್ಯಮಂತ್ರಿಯಾದ ಬಳಿಕ ನೋಂದಣಿ ಶುಲ್ಕ ಹೆಚ್ಚಾಗಿದೆ, ವಾಹನ ನೋಂದಣಿ ಶುಲ್ಕ ಜಾಸ್ತಿಯಾಗಿದೆ, ಹಾಲಿನ ದರ ಏರಿಕೆಯಾಗಿದೆ, ನೀರಿನ ದರ ಏರಿಸುವ ಸಾಧ್ಯತೆ ಇದೆಯಂತೆ ಎಂದು ಹೇಳಿದ ರವಿ ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಯನ್ನು ಸರ್ಕಾರ ಕಳೆದ ಎಂಟು ತಿಂಗಳಿಂದ ಬಾಕಿಯುಳಿಸಿಕೊಂಡಿದೆ ಎಂದರು. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಬೇರೆ ಕೆಲಸಗಳಿಗೆ ದುರುಪಯೋಗವಾಗುತ್ತಿದೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದುರ್ಬಳಕೆಯಾದ ₹ 187 ಕೋಟಿಯಲ್ಲಿ ಕೇವಲ ₹15 ಕೋಟಿ ಮಾತ್ರ ರಿಕವರ್ ಆಗಿದೆ, ಅದರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಗೆ ಎಷ್ಟು ಹಣ ಹೋಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಬೇಕು ಎಂದು ಬಿಜೆಪಿ ನಾಯಕ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು!

Follow us on