Loading video

ತಮ್ಮ ಕುರ್ಚಿಯನ್ನು ಗಟ್ಟಿಗೊಳಿಸಿಕೊಳ್ಳಲು ಸಿದ್ದರಾಮಯ್ಯ ಸಮಾವೇಶ ಮಾಡಿಸುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

|

Updated on: Nov 30, 2024 | 1:01 PM

ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಹೊಸಪೇಟೆ ಶಾಸಕ ಗವಿಯಪ್ಪ ಹೇಳಿದ್ದರು, ಆದರೆ ಸಾಯಂಕಾಲವಾಗುವಷ್ಟರಲ್ಲಿ ಅವರ ಬಾಯಿಮುಚ್ಚಿಸಿ ಯು-ಟರ್ನ್ ಹೊಡೆಯುವಂತೆ ಮಾಡಲಾಯಿತು, ಕಾಂಗ್ರೆಸ್ ಶಾಸಕರ ಗತಿ ಹೀಗಾದರೆ ಜೆಡಿಎಸ್ ಮತ್ತು ಬಿಜೆಪಿ ಶಾಸಕರ ಸ್ಥಿತಿ ಏನಾಗಿರಬೇಡ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಸ್ವಾಭಿಮಾನ ಸಮಾವೇಶವನ್ನು ಸಿದ್ದರಾಮಯ್ಯನವರು ಯಾವ ಪುರಷಾರ್ಥಕ್ಕೆ ಮಾಡಿಸುತ್ತಿದ್ದಾರೋ ಗೊತ್ತಿಲ್ಲ, ಸರ್ಕಾರದ ಸಾಧನೆಗಳನ್ನು ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಅವರು ಸಮಾವೇಶ ಮಾಡುತ್ತಿರಬಹುದು ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಸಮಾವೇಶದ ಮೂಲಕ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಜಾಸ್ತಿ ತಮ್ಮದೇ ಹೈಕಮಾಂಡ್ ಗೆ ತಮ್ಮ ಸಾಮರ್ಥ್ಯದ ಸಂದೇಶ ನೀಡಿ ಸಿಎಂ ಕುರ್ಚಿಯನ್ನು ಗಟ್ಟಿಮಾಡಿಕೊಳ್ಳುವ ಯೋಚನೆ ಮಾಡಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸೋತಿದ್ದೇನೆ ಅಂತ ಮನೆಯಲ್ಲಿ ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ: ನಿಖಿಲ್ ಕುಮಾರಸ್ವಾಮಿ