ಮೈಸೂರಲ್ಲಿ ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಶಿವಕುಮಾರ್ ದಂಗಾದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2022 | 2:09 PM

ಶಿವಕುಮಾರ ಜನರ ನಡುವೆ ನಿಂತಿದ್ದರೂ ಸಿದ್ದರಾಮಯ್ಯನವರ ಕಾರು ಬರುತ್ತಿದ್ದಂತೆಯೇ ಕಾರ್ಯಕರ್ತರು ಕನಕಪುರ ಬಂಡೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾರೆ.

ಮೈಸೂರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಖದರೇ ಹಾಗೆ ಮಾರಾಯ್ರೇ. ರಾಹುಲ್ ಗಾಂಧಿ (Rahul Gandhi) ಜೊತೆಗಿದ್ದರೂ ಜನ ಇವರಿಗೆ ಮುಗಿ ಬೀಳುತ್ತಾರೆ. ಭಾರತ ಜೋಡೋ ಯಾತ್ರೆ ಮೈಸೂರು ನಗರದ ಮೂಲಕ ಹಾದುಹೋಗುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಚೆನ್ನಾಗಿ ಅರಿತುಕೊಂಡರು. ವಿಡಿಯೋ ನೀವು ಅದನ್ನು ನೋಡಬಹುದು. ಶಿವಕುಮಾರ ಜನರ ನಡುವೆ ನಿಂತಿದ್ದರೂ ಸಿದ್ದರಾಮಯ್ಯನವರ ಕಾರು ಬರುತ್ತಿದ್ದಂತೆಯೇ ಕಾರ್ಯಕರ್ತರು ಕನಕಪುರ ಬಂಡೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾರೆ. ನೆರೆದ ಜನರೆಲ್ಲ ಸಿದ್ದರಾಮಯ್ಯನವರಿಗೆ ಜಯಕಾರ ಹಾಕುವುದನ್ನು ಕಂಡು ಡಿಕೆಶಿ ಅವಾಕ್ಕಾಗಿ ಅಲ್ಲಿಂದ ಸರಿದುಹೋಗುತ್ತಾರೆ.