ಬಸವಣ್ಣನವರ ಕೆಲವು ತತ್ವಗಳನ್ನಾದರೂ ಪಾಲಿಸುವ ಪ್ರಯತ್ನ ಮಾಡುತ್ತಿದ್ದೇನೆ: ಸಿದ್ದರಾಮಯ್ಯ

|

Updated on: Nov 18, 2024 | 4:47 PM

ರಮಣಶ್ರೀ ಶರಣ ಪ್ರಶಸ್ತಿಗೆ ಪಾತ್ರರಾದ ಹಿರಿಯರು ನೂರು ವರ್ಷ ಬಾಳಲಿ ಎಂದು ಹಾರೈಸಿದ ಸಿದ್ದರಾಮಯ್ಯ, ತನಗೂ 100 ವರ್ಷ ಬದುಕುವ ಆಸೆಯಿದೆ, ಅದರೆ ಮಧುಮೇಹದಿಂದ ಬಳಲುತ್ತಿರುವುದರಿಂದ ಅದು ಸಾಧ್ಯವಾಗಲಾರದು, ವೇದಿಕೆ ಮೇಲಿರುವ ಸಂಸದ ಬಸವರಾಜ ಬೊಮ್ಮಅಯಿ ಅವರಿಗೂ ತನಗಿರುವ ಕಾಯಿಲೆಯಿದೆ ಎಂದು ಹೇಳಿದರು.

ಬೆಂಗಳೂರು: ನಗರದಲ್ಲಿ ಆಯೋಜಿಸಲಾಗಿದ್ದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವಣ್ಣನವರಿಗೆ ಸಂಬಂಧಿಸಿದ ಯಾವ ಕಾರ್ಯಕ್ರಮವನ್ನೂ ತಾನು ಮಿಸ್ ಮಾಡಲ್ಲ, ಬಸವಾದಿ ಶರಣರ ಸಾಹಿತ್ಯದಿಂದ ಅತಿಹೆಚ್ಚು ಪ್ರಭಾವಿತನಾಗಿದ್ದೇನೆ, ಬಸವಣ್ಣನವರ ತತ್ವಗಳನ್ನು ಶೇಕಡ ನೂರಕ್ಕೆ ನೂರು ಪಾಲಿಸಲಾಗದಿದ್ದರೂ ಕೆಲವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ! ವಿಡಿಯೋ ಇಲ್ಲಿದೆ