ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ, ಸಿಎಂ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ
ಪಟ್ಟಿ ಅಂತಿಮಗೊಂಡ ಬಳಿಕ ಯಾವುದೇ ಶಾಸಕ ಅಸಮಾಧಾನಗೊಳ್ಳಲಾರ ಅನ್ನೋದನ್ನು ಖಚಿತಪಡಿಸಿಕೊಳ್ಳಿ ಅಂತ ಸುರ್ಜೆವಾಲಾ ಹೇಳಿದ್ದರಿಂದ ಇಂದು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಪರಮೇಶ್ವರ ಪುನಃ ಸಭೆ ಸೇರಿದ್ದಾರೆ. ಪಟ್ಟಿಯನ್ನು ತಯಾರು ಮಾಡೋದು ಅಷ್ಟು ಸುಲಭವಲ್ಲ, ಯಾಕೆಂದರೆ ಅನೇಕ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸಬೇಕಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ತಮ್ಮ ನಿವಾಸದಲ್ಲಿ ಒಂದು ಮಹತ್ತರ ಸಭೆ ನಡೆಸಿದರು. ಸಬೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಮಾತ್ರ ಭಾಗವಹಿಸಿದ್ದರು. ಶಿವಕುಮಾರ್ ಮುಖ್ಯಮಂತ್ರಿಯವರ ಕಾವೇರಿ ನಿವಾಸಕ್ಕೆ ಆಗಮಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಿನ್ನೆ ಆರಂಭಗೊಂಡಿದ್ದು ನಿಜವಾದರೂ ಪಟ್ಟಿ ಅಂತಿಮಗೊಂಡಿಲ್ಲ. ಮಂಗಳವಾರ ತಡರಾತ್ರಿಯವರೆಗೆ ರಾಜ್ಯದ ನಾಯಕರು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಆವರೊಂದಿಗೆ ಚರ್ಚೆ ನಡೆಸಿದರು. ಪಟ್ಟಿ ಅಂತಿಮಗೊಂಡ ಬಳಿಕ ಯಾವುದೇ ಶಾಸಕ ಅಸಮಾಧಾನಗೊಳ್ಳಲಾರ ಅನ್ನೋದನ್ನು ಖಚಿತಪಡಿಸಿಕೊಳ್ಳಿ ಅಂತ ಸುರ್ಜೆವಾಲಾ ಹೇಳಿದ್ದರಿಂದ ಇಂದು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಪರಮೇಶ್ವರ ಪುನಃ ಸಭೆ ಸೇರಿದ್ದಾರೆ. ಪಟ್ಟಿಯನ್ನು ತಯಾರು ಮಾಡೋದು ಅಷ್ಟು ಸುಲಭವಲ್ಲ, ಯಾಕೆಂದರೆ ಅನೇಕ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ