Siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿ ಅನ್ನೋದು ಬಹುತೇಕ ಖಚಿತ, ಆದರೆ ಹಿರಿಯ ನಾಯಕನದ್ದುಈಗಲೂ ನಿರ್ಭಾವುಕ ಮುಖಭಾವ!
ಕಳೆದೆರಡು ದಿನಗಳಿಂದ ಸಿದ್ದರಾಮಯ್ಯ ಇದೇ ಮುಖಮುದ್ರೆಯೊಂದಿಗೆ ದೆಹಲಿಯಲ್ಲಿ ಸುತ್ತುತ್ತಿದ್ದಾರೆ.
ದೆಹಲಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಂತ ಹೆಚ್ಚು ಕಡಿಮೆ ಖಚಿತವಾಗಿದೆ. ಆದರೆ, ಇಂದು ಬೆಳಗ್ಗೆ ಸಿದ್ದರಾಮಯ್ಯ ದೆಹಲಿಯ ಹೋಟೆಲೊಂದರಿಂದ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲು ತೆರಳುವಾಗ ಮುಖಗಂಟಿಕ್ಕಿಕೊಂಡೇ ಇದ್ದರು. ದೆಹಲಿಯ ಪತ್ರಕರ್ತರು ಅವರನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದರೂ ಸಿದ್ದರಾಮಯ್ಯ ತುಟಿ ಬಿಚ್ಚಲಿಲ್ಲ. ಕೆಲ ಮಹಿಳಾ ವರದಿಗಾರರು, ಸಮ್ಮಿಶ್ರ ಸರ್ಕಾರ ಪತನಕ್ಕೆ ನೀವೇ ಕಾರಣ ಅಂತ ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ದೂರುತ್ತಿದ್ದಾರೆ, ಇದಕ್ಕೆ ನೀವೇನು ಹೇಳುತ್ತೀರಿ ಅಂತ ಗಂಭೀರ ಸ್ವರೂಪದ ಪ್ರಶ್ನೆ ಕೇಳಿದರೂ ಸಿದ್ದರಾಮಯ್ಯನವರದ್ದು ಅನೆ ನಡಿಗೆ! ಕಳೆದೆರಡು ದಿನಗಳಿಂದ ಸಿದ್ದರಾಮಯ್ಯ ಇದೇ ಮುಖಮುದ್ರೆಯೊಂದಿಗೆ ದೆಹಲಿಯಲ್ಲಿ ಸುತ್ತುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ