ತಮ್ಮ ಜಮೀನಿಗೆ ₹ 62 ಕೋಟಿ ಕೇಳುವ ಸಿದ್ದರಾಮಯ್ಯ ಪರಿಹಾರಕ್ಕಾಗಿ ರೈತರು ಪಡುವ ಪಡಿಪಾಟಲು ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ನಿನ್ನೆ ಮುಡಾ ಸೈಟು ಹಂಚಿಕೆ ಹಗರಣದ ಬಗ್ಗೆ ಮುಖ್ಯಮಂತ್ರಿ ಪರ ಸುದ್ದಿಗೋಷ್ಟಿ ನಡೆಸಿದ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣರನ್ನು ಕುಮಾರಸ್ವಾಮಿ ತಿವಿದರು. ಹಿಂದೆ ಸಹಾಯಕ ಅಡ್ವೋಕೇಟ್ ಜನರಲ್ ಆಗಿದ್ದ ಮತ್ತು ಈಗ ಶಾಸಕರಾಗಿರುವವರು ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿ ಏನೇನೋ ಹೇಳಿದ್ದನ್ನು ಗಮನಿಸಿದ್ದೇನೆ, ಕಾದು ನೋಡೋಣ ಮುಂದೇನಾಗುತ್ತೆ ಅಂತ ಕೇಂದ್ರ ಸಚಿವ ಹೇಳಿದರು.
ಮೈಸೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಇಂದು ನಗರಕ್ಕಾಗಮಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮುಡಾ ಅಕ್ರಮ ಸೈಟು ಹಂಚಿಕೆ ಹಗರಣದ ಬಗ್ಗೆ ಮಾತಾಡುತ್ತಾ, ಈಗ ಸಿಡಿ ತಯಾರಿಕಾ ಕೆಲಸ ನಿಂತಿದೆ ಅದರೆ ಮುಡಾದ ಕೆಲಸ ಶುರುವಾಗಿದೆ ಅಂತ ಒಗಟಿನಲ್ಲಿ ಹೇಳಿದರು. ನಿನ್ನೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮಗೆ ಸೈಟುಗಳು ಬೇಡ, ಅವುಗಳನ್ನು ಮುಡಾ ವಾಪಸ್ಸು ತೆಗೆದುಕೊಳ್ಳಲಿ, ಅವುಗಳ ಬದಲಿಗೆ ಮುಡಾ ಸ್ವಧೀನಪಡಿಸಿಕೊಂಡಿರುವ ನಮ್ಮ 3.16 ಎಕರೆ ಜಮೀನಿಗೆ ಮಾರುಕಟ್ಟೆ ಬೆಲೆ ರೂ. 62 ಕೋಟಿ ನೀಡಲಿ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅವರು ಅಷ್ಟು ಸುಲಭವಾಗಿ ಮುಡಾ ₹ 62 ಕೋಟಿ ಕೊಡಲಿ ಅಂತ ಹೇಳಿದ್ದಾರೆ, ಅದರೆ ಸರ್ಕಾರದ ವಿವಿಧ ಯೋಜನೆಗಳಿಗೆ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ, ಅವರಿಗೆ ಪರಿಹಾರ ನೀಡುವಾಗ ಮಾರುಕಟ್ಟೆ ಬೆಲೆ ಮಾನದಂಡ ಅನುಸರಿಸಲಾಗುತ್ತದೆಯೇ? ಅಮಾಯಕ ರೈತರು ತಮ್ಮ ಪರಿಹಾರದ ಹಣ ಪಡೆಯಲು ಕೋರ್ಟು ಕಚೇರಿ ಅಂತ ಅಲೆದಾಡುತ್ತಾ ಚಪ್ಪಲಿ ಸವೆಸುತ್ತಾರೆ. ಮುಖ್ಯಮಂತ್ರಿಯವರು ತಮ್ಮ ಜಮೀನಿಗೆ ರೂ. 62 ಕೋಟಿ ಕೇಳುವ ಮೊದಲು ರೈತರುಪಡುವ ಬವಣೆ ಬಗ್ಗೆ ಯೋಚಿಸಿದರೆ? ಅಂತ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ

ಹಕ್ಕಿ ಜ್ವರ: ಕೋಳಿ ಫಾರ್ಮ್ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ

ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ

ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
