Karnataka Bandh: ರ‍್ಯಾಲಿ ತೆಗೆಯಲು ಅವಕಾಶ ನೀಡದ ಸಿದ್ದರಾಮಯ್ಯ ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ? ವಾಟಾಳ್ ನಾಗರಾಜ್

|

Updated on: Sep 29, 2023 | 1:25 PM

Karnataka Bandh: ನಾವು ರ‍್ಯಾಲಿ ತೆಗೆಯಬಾರದು; ಆದರೆ, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಬಹುದಂತೆ. ಅಂದರೆ ಸಿದ್ದರಾಮಯ್ಯ ಸರ್ಕಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲು ವಿಶ್ವಸಂಸ್ಥಯಿಂದ ಪರವಾನಗಿ ಪಡೆದುಕೊಂಡಿದೆಯೇ ಎಂದು ವಾಟಾಳ್ ಗುಡುಗಿದರು.

ಬೆಂಗಳೂರು: ಕರ್ನಾಟಕ ಬಂದ್​ಗೆ ಬುರ್ಖಾ ಧರಿಸಿ ಬಂದ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ (Vatal Nagaraj), ಕನ್ನಡ ಪರ ಹೋರಾಟಗಾರರಿಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ (rally) ತೆಗೆಯಲು ಅವಕಾಶ ನೀಡದ ಸರ್ಕಾರ ಪೊಲೀಸರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಹೋರಾಟಗಾರರಿಗೆ ಅರ್ಥವಾಗುತ್ತಿಲ್ಲ, ನಾವು ರ‍್ಯಾಲಿ ತೆಗೆಯಬಾರದು; ಆದರೆ, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಬಹುದಂತೆ. ಅಂದರೆ ಸಿದ್ದರಾಮಯ್ಯ ಸರ್ಕಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲು ವಿಶ್ವಸಂಸ್ಥಯಿಂದ ಪರವಾನಗಿ ಪಡೆದುಕೊಂಡಿದೆಯೇ ಎಂದು ವಾಟಾಳ್ ಗುಡುಗಿದರು. ಸಿದ್ದರಾಮಯ್ಯ ಮೇಲೆ ಯಾರ ಒತ್ತಡವಿದೆ, ಅವರು ಯಾಕೆ ಮೆರವಣಿಗೆ ನಡೆಸಲು ಅವಕಾಶ ನೀಡುತ್ತಿಲ್ಲ? ಕನ್ನಡ ಹೋರಾಟಗಾರರು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ ತೆಗೆಯಲು ಅನುಮತಿ ನೀಡಿದ್ದರೆ ಸರಕಾರಕ್ಕೆ ಆಗುತ್ತಿದ್ದ ನಷ್ಟವಾದರೂ ಏನು ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ