ಮುಖ್ಯಮಂತ್ರಿ ಸಿದ್ದ್ದರಾಮಯ್ಯ ನಿವಾಸ ಪಕ್ಕದ ನಿವಾಸಿಗೆ ಬೆಂಗಾವಲು ಪಡೆ ವಾಹನ ಮತ್ತು ಜನರ ವಾಹನಗಳಿಂದ ಆಗುತ್ತಿರುವ ಸಮಸ್ಯೆ ಮುಂದುವರಿದಿದೆ!
Elderly person troubled again: ಕಳೆದ ಬಾರಿಯ ವಿಡಿಯೋದಲ್ಲಿ ಅವರು ನೇರವಾಗಿ ಮುಖ್ಯಮಂತ್ರಿಗೆ ತಮ್ಮ ದೂರು ಹೇಳಿಕೊಂಡ ದೃಶ್ಯ ಸೆರೆಯಾಗಿತ್ತು. ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿದ್ದರು
ಬೆಂಗಳೂರು: ವಿಡಿಯೋದಲ್ಲಿ ಕಾಣುವ ಹಿರಿಯ ವ್ಯಕ್ತಿ (senior citizen) ನಿಮಗೆ ನೆನಪಿರಬಹುದು. ಕೇವಲ ವಾರದ ಹಿಂದೆ ಇವರ ಒಂದು ವಿಡಿಯೋವನ್ನು ಹಾಕಿದ್ದೆವು. ಮುಖ್ಯಮಂತ್ರಿ ನಿವಾಸದ ಪಕ್ಕದ ಮನೆಯ ನಿವಾಸಿಯಾಗಿರುವ ಇವರ ಮನೆ ಗೇಟಿನ ಮುಂದೆ ಸಿದ್ದರಾಮಯ್ಯರ (CM Siddaramaiah) ಬೆಂಗಾವಲು ಪಡೆ (convoy) ಮತ್ತು ಅವರನ್ನು ಭೇಟಿಯಾಗಲು ಬರುವ ಜನರ ಕಾರುಗಳು ನಿಲ್ಲುತ್ತವೆ. ಹಾಗಾಗಿ, ಹಿರಿಯ ವ್ಯಕ್ತಿಯ ಕುಟುಂಬಕ್ಕೆ ತಮ್ಮ ವಾಹನಗಳನ್ನು ಹೊರತರಲು ಸಾಧ್ಯವಾಗುತ್ತಿಲ್ಲ. ಕಳೆದ ಬಾರಿಯ ವಿಡಿಯೋದಲ್ಲಿ ಅವರು ನೇರವಾಗಿ ಮುಖ್ಯಮಂತ್ರಿಗೆ ತಮ್ಮ ದೂರು ಹೇಳಿಕೊಂಡ ದೃಶ್ಯ ಸೆರೆಯಾಗಿತ್ತು. ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿದ್ದರು ಮತ್ತು ತಮ್ಮ ಸಿಬ್ಬಂದಿಗೆ ಕಾರುಗಳನ್ನು ಬೇರೆಡೆ ಪಾರ್ಕ್ ಮಾಡುವಂತೆ ಸೂಚನೆ ನೀಡಿರಲೂಬಹುದು. ಆದರೆ, ಇಂದು ಬೆಳಗ್ಗೆ ಸಿದ್ದರಾಮಯ್ಯ ಕಲಬುರಗಿಗೆ ತೆರಳುವಾಗ ಅದೇ ರಾಗ ಅದೇ ತಾಳ. ಕೋಪದಿಂದ ಭಸುಗುಡುತ್ತಿರುವ ಹಿರಿಯ ವ್ಯಕ್ತಿ, ಕಾರುಗಳನ್ನು ಸರಿಸುವಂತೆ ಹೇಳಿದರೂ ಪೊಲೀಸರು ಅವರ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿಲ್ಲ. ಕೊನೆಗೊಂದು ದಿನ ಈ ವಯಸ್ಕ ವ್ಯಕ್ತಿ ಬೇಸತ್ತು ನ್ಯಾಯಾಲಯದ ದ್ವಾರ ತಟ್ಟಿದರೆ ನೊಟೀಸ್ ಬರೋದು ಮುಖ್ಯಮಂತ್ರಿಗಳ ನಿವಾಸಕ್ಕೆ! ವಕೀಲರೂ ಆಗಿರುವ ಸಿದ್ದರಾಮಯ್ಯನವರಿಗೆ ಅದು ಗೊತ್ತಿಲ್ಲದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ