ಸೆಲ್ಫೀಗಾಗಿ ಸಿದ್ದರಾಮಯ್ಯನವರಿಗೆ ಮುಗಿಬಿದ್ದ ಜನ ಟಿವಿ9 ವರದಿಗಾರನಿಗೆ ಪ್ರಶ್ನೆ ಕೇಳಲೂ ಬಿಡಲಿಲ್ಲ!

ಕಾಂಗ್ರೆಸ್ ಹಿರಿಯ ನಾಯಕನೊಂದಿಗೆ ಮಾತಾಡುವುದು ಅಷ್ಟು ಸುಲಭವಾಗಿರಲಿಲ್ಲ. ಜನ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಸಿದ್ದರಾಮಯ್ಯನವರಿಗೆ ಮಹಿಳಾ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವರದಿಗಾರ ಮಾತಾಡಲು ಮುಂದೆ ಬಂದಾಗಲೆಲ್ಲ ಅಭಿಮಾನಿಗಳು ಅವರನ್ನು ಹಿಂದೆ ತಳ್ಳುತ್ತಿದ್ದಾರೆ.

ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಯ ನಾಲ್ಕನೇ ದಿನವೂ ಕೊನೆಗೊಂಡಿದೆ. ಆಡಳಿತಾರೂಢ ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಪಾದಯಾತ್ರೆಯ ನಾಲ್ಕುದಿನಗಳನ್ನು ಪೂರ್ತಿಗೊಳಿದೆ. ಏತನ್ಮಧ್ಯೆ, ಕರ್ನಾಟಕ ಹೈಕೋರ್ಟ್ ಸರ್ಕಾರ ಮತ್ತು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಎರಡನ್ನೂ ತರಾಟೆಗೆ ತೆಗೆದುಕೊಂಡಿದೆ. ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಯುತ್ತಿದ್ದರೂ ಸರ್ಕಾರ ಅದನ್ನು ತಡೆಯಲು ಅಸಮರ್ಥವಾಗಿದೆಯೇ ಅಂತ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಹಾಗೆಯೇ, ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಹೊಣೆಗಾರಿಕೆ ಇಲ್ಲವೇ, ಪಾದಯಾತ್ರೆಯಲ್ಲಿ ಎಸ್ ಒ ಪಿಗಳನ್ನು ಪಾಲಿಸಲಾಗುತ್ತಿದೆಯೇ ಎಂದು ನ್ಯಾಯಾಲಯ ಕೇಳಿದೆ. ಸರ್ಕಾರ ಮತ್ತು ಕಾಂಗ್ರೆಸ್ ಎರಡಕ್ಕೂ ಒಂದು ದಿನದೊಳಗೆ ತಮ್ಮ ಉತ್ತರಗಳನ್ನು ತಿಳಿಸುವಂತೆ ಕೋರ್ಟ್ ಸೂಚಿಸಿದೆ.

ಕೋರ್ಟ್ ಸೂಚನೆಗೆ ಕಾಂಗ್ರೆಸ್ ಏನು ಉತ್ತರ ನೀಡಲಿದೆ ಅಂತ ತಿಳಿದುಕೊಳ್ಳುವ ಕಾತುರ ಎಲ್ಲ ಕನ್ನಡಿಗರಲ್ಲಿದೆ. ಅದನ್ನು ಅರಿಯಲೆಂದೇ ಟಿವಿ9 ವರದಿಗಾರ ಶಿವರಾಜ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನರನ್ನು ಮಾತಾಡಿಸಲು ರಾಮನಗರಕ್ಕೆ ಹೋಗಿದ್ದರು.

ಆದರೆ, ಕಾಂಗ್ರೆಸ್ ಹಿರಿಯ ನಾಯಕನೊಂದಿಗೆ ಮಾತಾಡುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆ ಅನ್ನೋದು ನಿಮಗೆ ಈ ವಿಡಿಯೋನಲ್ಲಿ ಗೊತ್ತಾಗುತ್ತದೆ. ಜನ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಸಿದ್ದರಾಮಯ್ಯನವರಿಗೆ ಮಹಿಳಾ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವರದಿಗಾರ ಮಾತಾಡಲು ಮುಂದೆ ಬಂದಾಗಲೆಲ್ಲ ಅಭಿಮಾನಿಗಳು ಅವರನ್ನು ಹಿಂದೆ ತಳ್ಳುತ್ತಿದ್ದಾರೆ.

ಕೊನೆಗೆ ಸಿದ್ದರಾಮಯ್ಯನವರೇ ಅಸಹಾಯಕತೆ ಮತ್ತು ಕೋಪದಿಂದ ಹೇಯ್ ಎಂದು ಕಿರುಚುತ್ತಾರೆ. ಆದರೂ ಜನ ಹಿಂದೆ ಸರಿಯುವುದಿಲ್ಲ ಮಾರಾಯ್ರೇ.

ಇದನ್ನೂ ಓದಿ:   Viral Video: ಕಾರಿಗೆ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡು ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ ಮಹಿಳೆ; ವಿಡಿಯೋ ವೈರಲ್

Click on your DTH Provider to Add TV9 Kannada