ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡದಿರುವ ಕಾರಣ ಅವರನ್ನು ಮಠದ ವಿರೋಧಿ ಅನ್ನಲಾಗದು: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

| Updated By: preethi shettigar

Updated on: Oct 24, 2021 | 9:57 AM

ಸಿದ್ದರಾಮಯ್ಯನವರು ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡದಿರುವುದನ್ನು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಮುಂದೆ ಪ್ರಸ್ತಾಪಿಸಲಾಯಿತು. ಆದರೆ, ಸ್ವಾಮೀಜಿ ಅವರು ಅದನ್ನು ತಪ್ಪು ಅನ್ನುವ ರೀತಿಯಲ್ಲಿ ಮಾತಾಡಲಿಲ್ಲ.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಾನಗಲ್ ಮತ್ತು ಸಿಂದಗಿ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಅಧಿಕಾರದಲ್ಲಿರಲಿ, ಇಲ್ಲದಿರಲಿ ಸುದ್ದಿಯಲ್ಲಿರೋದು ಸಿದ್ದರಾಮಯ್ಯನವರ ಜಾಯಮಾನ. ಶನಿವಾರದ ಸಂದರ್ಭವನ್ನೇ ತೆಗೆದುಕೊಳ್ಳಿ, ಅವರ ಬಗ್ಗೆ ಚರ್ಚೆ ಈಗ ಬಾಗಲಕೋಟೆ ಪ್ರವಾಸದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯಿತು.

ಸಿದ್ದರಾಮಯ್ಯನವರು ತಮ್ಮನ್ನು ಒಬ್ಬ ನಾಸ್ತಿಕ ಎಂದು ಹೇಳಿಕೊಂಡಿದ್ದ ಸಂದರ್ಭವಿದೆ. ಅದರೆ, ನಂತರ ಅವರು ನಾಸ್ತಿಕ ಅಂತ ಯಾವತ್ತೂ ಹೇಳಿಕೊಂಡಿಲ್ಲ ಆದರೆ, ಮೌಢ್ಯಗಳನ್ನು ನಂಬೋದಿಲ್ಲ ಎಂದು ಹೇಳಿದ್ದೆ ಅಂತ ಸಮಜಾಯಿಷಿ ನೀಡಿದ್ದರು. ಅವರು ಕೈಯಲ್ಲಿ ಆಗಾಗ ಹೆಚ್ ಡಿ ರೇವಣ್ಣ ಅವರ ಹಾಗೆ ನಿಂಬೆಹಣ್ಣು ಹಿಡಿದಿರುವುದು ಮಾಧ್ಯಮಗಳ ಕೆಮೆರಾಗಳಿಗೆ ಸೆರೆ ಸಿಕ್ಕಿದೆ.

ಸಿದ್ದರಾಮಯ್ಯನವರು ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡದಿರುವುದನ್ನು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಮುಂದೆ ಪ್ರಸ್ತಾಪಿಸಲಾಯಿತು. ಆದರೆ, ಸ್ವಾಮೀಜಿ ಅವರು ಅದನ್ನು ತಪ್ಪು ಅನ್ನುವ ರೀತಿಯಲ್ಲಿ ಮಾತಾಡಲಿಲ್ಲ. ಸಿದ್ದರಾಮಯ್ಯನವರು ಮಠಕ್ಕೆ ಭೇಟಿ ನೀಡಿಲ್ಲ ಅಂದಾಕ್ಷಣ ಅವರನ್ನು ಮಠದ ವಿರೋಧಿ ಅಂತ ಹೇಳುವುದು ಸರಿಯಲ್ಲ ಅಂತ ಶ್ರೀಗಳು ಹೇಳಿದರು. ಅವರು ಇದುವರೆಗೆ ಬಾರದೇ ಹೋಗಿದ್ದು ತಪ್ಪು ಅಂತ ಹೇಳಲಾಗದು, ಮುಂದೆ ಅವರು ಬರಬಹುದು ಎಂದು ಸ್ವಾಮೀಜಿ ಹೇಳಿದರು. ಮಠಕ್ಕೆ ಎಲ್ಲರೂ ಭೇಟಿ ನೀಡಬೇಕು ಎಂಬ ನಿಯಮವೇನೂ ಇಲ್ಲ ಎಂದು ಅವರು ಹೇಳಿದರು.
ಅಲ್ಲದೆ, ಕೊವಿಡ್ ಪಿಡುಗು ಮತ್ತು ಮೂರನೇ ಅಲೆಯ ಭೀತಿ ಇನ್ನೂ ದೂರವಾಗಿರದ ಕಾರಣ ಉಡುಪಿ ಮಠದಲ್ಲಿ ಜನ ಸಂಪರ್ಕ ಸಭೆಗಳನ್ನು ಮಾಡುತ್ತಿಲ್ಲ ಮತ್ತು ಯಾವ ಕಾರ್ಯಕ್ರಮವನ್ನೂ ಆಯೋಜಿಸುತ್ತಿಲ್ಲ. ಮಠದಲ್ಲಿ ಪುನಃ ಹಿಂದಿನಂತೆ ಕಾರ್ಯಕ್ರಮಗಳು ನಡೆಯಲಾರಂಭಿಸಿದರೆ ಸಿದ್ದರಾಮಯ್ಯನವರು ಬರಬಹುದೇನೋ, ಕಾದು ನೋಡೋಣ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ:  Viral Video: ಮೇಲೇರಲು ಸಹಾಯ ಮಾಡಿದ ಈ ಇರುವೆಗೆ ಕೊನೆಗೆ ಏನು ಉಳಿಯಿತು?; ಬದುಕಿನ ಪಾಠ ಹೇಳುವ ಈ ವಿಡಿಯೋ ನೋಡಿ

Follow us on