ಮೈಸೂರಿನಲ್ಲಿ ನಡೆದ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿ ಭಾಷಣ ಮಾಡಿದ್ದ ಸಿದ್ದೇಶ್ವರ ಸ್ವಾಮೀಜಿ
Siddeshwara Swamiji: ಪತಂಜಲಿ ಯೋಗ ಸೂತ್ರದ ಬಗ್ಗೆ ಸಿದ್ದೇಶ್ವರ ಶ್ರೀ ಪುಸ್ತಕ ಬರೆದಿದ್ದಾರೆ. ಸಿದ್ದೇಶ್ವರಶ್ರೀಗಳ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ಅದೇ ಪುಸ್ತಕವನ್ನು ಅಂದು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.
ಮೈಸೂರು: ಕಳೆದ ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುತ್ತೂರು ಶಾಖಾ ಮಠದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿದ್ದೇಶ್ವರ ಸ್ವಾಮೀಜಿ ಅವರು ಮೋದಿಯವರನ್ನು ಹೊಗಳಿ ಮಾತನಾಡಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರ ಭಾಷಣಕ್ಕೆ ಮೋದಿ ಫಿದಾ ಆಗಿದ್ದರು.
ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಸುತ್ತೂರು ಶಾಖಾ ಮಠದಲ್ಲಿ ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಿದ್ದರು. ಆಗ ನಡೆದ ಸುತ್ತೂರು ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಮೋದಿ ಬಗ್ಗೆ ಮಾತನಾಡಿದ್ದರು. ಮೋದಿಯವರನ್ನು ನೋಡುವುದೇ ಒಂದು ಸೌಭಾಗ್ಯ. ಇಂತಹ ಪ್ರಧಾನಿ ಈ ದೇಶಕ್ಕೆ ಸಿಕ್ಕಿದ್ದು ಪುಣ್ಯ. ದಿನದ ಎಲ್ಲಾ ಸಮಯದಲ್ಲೂ ದೇಶದ ಅಭಿವೃದ್ಧಿ, ಜನತೆಗಾಗಿ ಇವರು ಸಮಯವನ್ನು ಮೀಸಲಿಟ್ಟಿದ್ದಾರೆ. ದೇಶವಷ್ಟೇ ಅಲ್ಲದೆ ವಿದೇಶದ ಜನರೂ ಮೋದಿಯನ್ನು ಪ್ರೀತಿಸುತ್ತಾರೆ. ಜನರ ಮನಸ್ಸನ್ನು ಮೋದಿ ಅರಳಿಸಿದ್ದಾರೆ. ಭಾರತ ಕಂಡ ಅಪರೂಪದ ವ್ಯಕ್ತಿ ಮೋದಿ ಎಂದು ಸಿದ್ದೇಶ್ವರ ಸ್ವಾಮೀಜಿ ಅವರು ಮೋದಿಯವರನ್ನು ಹೊಗಳಿ ಮಾತನಾಡಿದ್ದರು.
ಪತಂಜಲಿ ಯೋಗ ಸೂತ್ರದ ಬಗ್ಗೆ ಸಿದ್ದೇಶ್ವರ ಶ್ರೀ ಪುಸ್ತಕ ಬರೆದಿದ್ದಾರೆ. ಸಿದ್ದೇಶ್ವರಶ್ರೀಗಳ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ಅದೇ ಪುಸ್ತಕವನ್ನು ಅಂದು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.