Siddheshwar Swamiji: ಮುಸ್ಲಿಂ ಮನೆಗಳಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ; ಶ್ರೀಗಳಿಗೆ ಮುಸ್ಲಿಂ ಮನೆಯಲ್ಲಿ ಪೂಜೆ

TV9kannada Web Team

TV9kannada Web Team | Edited By: Rakesh Nayak Manchi

Updated on: Jan 03, 2023 | 1:15 PM

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿಧನ ಹೊಂದಿದ ಹಿನ್ನಲೆ , ಎಲ್ಲಾ ಜಾತಿ-ಧರ್ಮದವರು ನಮನ ಸಲ್ಲಿಸುತ್ತಿದ್ದಾರೆ. ಶ್ರೀಗಳ ಹುಟ್ಟೂರಿನಲ್ಲಿ ಜಾತಿ, ಭೇದ ಮರೆತು ನಮನ ಸಲ್ಲಿಸಲಾಗುತ್ತಿದೆ.

ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Sri Siddeshwara Swamiji) ಕಳೆದ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾಭಾಗಗಳಿಂದ ಭಕ್ತಸಾಗರ ಹರಿದುಬರುತ್ತಿದ್ದು, ಎಲ್ಲಾ ಜಾತಿ-ಧರ್ಮದವರು ನಮನ ಸಲ್ಲಿಸುತ್ತಿದ್ದಾರೆ. ಶ್ರೀಗಳ ಹುಟ್ಟೂರಿನಲ್ಲಿ ಜಾತಿ, ಭೇದ ಮರೆತು ನಮನ ಸಲ್ಲಿಸಲಾಗುತ್ತಿದ್ದು, ಗ್ರಾಮದ ಹಲವು ಮುಸ್ಲಿಂ ಮನೆಗಳಲ್ಲಿ ಶ್ರೀಗಳ ಭಾವಚಿತ್ರಗಳು ಕಂಡುಬಂದಿವೆ. ಶ್ರೀಗಳ ಭಾವಚಿತ್ರಕ್ಕೆ ಮುಸ್ಲಿಂ ಕುಟುಂಬದಿಂದ ಪೂಜೆ ನಡೆದಿದ್ದು, ಮುಸ್ಲಿಮರ ಪ್ರಾರ್ಥನೆಯಲ್ಲಿ ಹಿಂದೂಗಳು ಕೂಡ ಭಾಗಿಯಾದರು. ಆ ಮೂಲಕ ಶ್ರೀಗಳ ತತ್ವದಂತೆ ಭಾವೈಕ್ಯತೆ ಸಂದೇಶ ಸಾರಲಾಯಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada