ಪ್ರಕೃತಿಯ ಮಡಿಲಲ್ಲಿ ಮಲಗಿದಂತಿರುವ ಭಾರತದ ಈ ಅತ್ಯಂತ ಸುಂದರ ಗ್ರಾಮಗಳು ನೋಡುಗನನ್ನು ಮಂತ್ರಮುಗ್ಧಗೊಳಿಸುತ್ತವೆ!
ದಕ್ಷಿಣ ಸಿಕ್ಕಿಂನಲ್ಲಿರುವ ರವಂಗ್ಲಾ ಹಿಮಚ್ಛಾದಿತ ಕಾಂಚೆನಜುಂಗಾ ಪರ್ವತದ ಮಡಿಲಲ್ಲಿರುವ ರಮಣೀಯ ಪ್ರದೇಶ. ಹಿಮಾಲಯ ಪರ್ವತ ಶ್ರೇಣಿ ಆವರಿಸಿಕೊಂಡಿರುವ ಈ ಸ್ಥಳ ಪ್ರಕೃತಿ ಪ್ರಿಯರ ಸ್ವರ್ಗ ಎನ್ನುತ್ತಾರೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು, ಸಸ್ಯರಾಶಿ ಪ್ರವಾಸಿಗರ ಮನಸೆಳೆಯುತ್ತವೆ.
ದೇಶವೊಂದರ ಸೌಂದರ್ಯ ಅದರ ಗ್ರಾಮೀಣ ಭಾಗದಲ್ಲಿ ಅಡಗಿರುತ್ತದೆ ಎಂದು ಹೇಳುತ್ತಾರೆ. ಈ ವಿಡಿಯೋನಲ್ಲಿ ಭಾರತದ ಅತ್ಯಂತ ಸುಂದರ, ರಮಣೀಯ ಗ್ರಾಮಗಳ ಪರಿಚಯವನ್ನು ನಾವು ನಿಮಗೆ ಮಾಡಿಸುತ್ತಿದ್ದೇವೆ. ಹಳ್ಳಿಗಳ ಸೌಂದರ್ಯ ಮತ್ತು ಸೊಬಗು ನಿಮ್ಮನ್ನು ದಂಗುಬಡಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ, ಇಲ್ಲಿ ತೋರಿಸಿರುವ ಹಳ್ಳಿಗಳು ದೇಶದ ಉತ್ತರ ಭಾಗದಲ್ಲಿವೆ. ಇಲ್ಲಿ ನೋಡಿ, ಇದು ಮೇಘಾಲನಲ್ಲಿರುವ ಮಾಲಿನಾಂಗ್ ಹೆಸರಿನ ಒಂದು ಗ್ರಾಮ. ಇದನ್ನು ಭಾರತದ ಅತ್ಯಂತ ಸ್ಛಚ್ಛ ಮತ್ತು ಪರಿಶುದ್ಧ ಹಳ್ಳಿ ಎಂದು ಹೇಳಲಾಗುತ್ತದೆ. ಯಾವುದೇ ರೀತಿಯ ಮಾಲಿನ್ಯದ ಲವಲೇಶವೂ ಈ ಗ್ರಾಮದಲ್ಲಿ ಕಾಣಸಿಗದು. ಸುಂದರ ಮತ್ತು ಪ್ರಶಾಂತ ನಿಸರ್ಗದ ಮಡಿಲಲ್ಲಿ 1,000 ವರ್ಷಕ್ಕಿಂತ ಹಳೆಯದಾಗಿರುವ ಅನೇಕ ಗಿಡಮರಗಳಿವೆ.
ಹಿಮಾಚಲ ಪ್ರದೇಶದ ಕುಲು ಕಣಿವೆಗೆ ನೀವು ಭೇಟಿ ನೀಡಿದ್ದರೆ ನಿಶ್ಚಿತವಾಗಿಯೂ ಈ ಗ್ರಾಮ ನೋಡಿರುತ್ತೀರಿ. ಇಲ್ಲಿನ ಜನಸಂಖ್ಯೆ ಬಹಳ ಕಡಿಮೆ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಮಲನಾ ಕ್ರೀಮ್ ನಿಂದ ತಯಾರಾರುವ ಹ್ಯಾಷ್ ಬಹಳ ಫೇಮಸ್ ಅಂತೆ. ಸುಂದರ ಪ್ರಕೃತಿಯ ಮಡಿಲಲ್ಲಿ ನಿಂತು, ಶುದ್ಧವಾದ ಗಾಳಿಯನ್ನು ಉಸಿರಾಡುತ್ತಾ ರುದ್ರ ಮನೋಹರ ಬಯಲಿನಲ್ಲಿ ನೀವು ಕಳೆದು ಹೋಗಿಬಿಡುತ್ತೀರಿ.
ದಕ್ಷಿಣ ಸಿಕ್ಕಿಂನಲ್ಲಿರುವ ರವಂಗ್ಲಾ ಹಿಮಚ್ಛಾದಿತ ಕಾಂಚೆನಜುಂಗಾ ಪರ್ವತದ ಮಡಿಲಲ್ಲಿರುವ ರಮಣೀಯ ಪ್ರದೇಶ. ಹಿಮಾಲಯ ಪರ್ವತ ಶ್ರೇಣಿ ಆವರಿಸಿಕೊಂಡಿರುವ ಈ ಸ್ಥಳ ಪ್ರಕೃತಿ ಪ್ರಿಯರ ಸ್ವರ್ಗ ಎನ್ನುತ್ತಾರೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು, ಸಸ್ಯರಾಶಿ ಪ್ರವಾಸಿಗರ ಮನಸೆಳೆಯುತ್ತವೆ.
ಹಳ್ಳಿಯೊಂದರ ಸೊಗಡು ಮತ್ತು ಸೊಬಗು ಕಾಣಬೇಕೆಂದರೆ ಹಿಮಾಚಲ ಪ್ರದೇಶದಲ್ಲಿರುವ ಜಂಜೇಲಿಯನ್ನು ಒಮ್ಮೆ ನೋಡಬೇಕು ಅಂತ ಹೇಳುತ್ತಾರೆ. ಇಲ್ಲಿ ಹಲವಾರು ದೇವಸ್ಥಾನಗಳಿವೆ ಮತ್ತು ರಸ್ತೆ ಬದಿಯ ಕೆಫೆ ಮತ್ತು ಚಿಕ್ಕ-ಪುಟ್ಟ ಟೀ ಸ್ಟಾಲ್ಗಳು ಗಮನ ಸೆಳೆಯುತ್ತವೆ.
ಲಾಹೊಲ್ ಸ್ಪಿಟಿಯಲ್ಲಿರುವ ನಾಕೊ ಗ್ರಾಮವನ್ನು ಕೆರೆಪಕ್ಕದ ತಾಂಡಾ ಎಂದು ಕರೆಯುತ್ತಾರೆ. ಇದು ಭಾರತ-ಚೀನಾದ ಗಡಿಯಲ್ಲಿದೆ. ಸ್ಫಟಿಕದಷ್ಟು ಶುಭ್ರವಾಗಿರುವ ಶುದ್ಧ ನೀರಿನ ಕೆರೆಗಳು ಇಲ್ಲಿವೆ.
ಹಿಮಾಚಲ ಪ್ರದೇಶದ ಚಿತ್ಕುಲ್ ಗ್ರಾಮ ಹಿಮಚ್ಛಾದಿತ ಮತ್ತು ರಮಣೀಯ ಗುಡ್ಡಗಾಡು ಪ್ರದೇಶದಲ್ಲಿದೆ. ಊರಿನ ಮಧ್ಯಭಾಗದಲ್ಲಿ ಭಗವಾನ್ ಬುದ್ಧನ ಮಂದಿರವಿದೆ.
ಜಿರೊ ಹೆಸರಿನ ಮತ್ತೊಂದು ಸುಂದರ ಹಳ್ಳಿ ಅರುಣಾಚಲ ಪ್ರದೇಶದಲ್ಲಿದೆ. ಇದು ಸಹ ಪ್ರಕೃತಿ ಮಡಿಲಲ್ಲಿರುವ, ಸುಂದರ ಪ್ರದೇಶ. ಕಂದಕಗಳು ಮತ್ತು ಭತ್ತದ ಜಮೀನುಗಳು ಈ ಪ್ರದೇಶದ ವೈಶಿಷ್ಟ್ಯವಾಗಿವೆ. ಟ್ರೇಕ್ಕಿಂಗ್ ಗೆ ಅತ್ಯತ್ತುಮ ಸ್ಥಳ.
ಕೊನೆಯದಾಗಿ, ಸಿಕ್ಕಿಂನಲ್ಲಿರುವ ಲಾಚೆನ್ ಹೆಸರಿನ ಅತ್ಯಂತ ಸುಂದರ ಗ್ರಾಮ 3,000 ಅಡಿ ಎತ್ತರದಲ್ಲಿದೆ. ಪ್ರದೇಶದಲ್ಲಿನ ಹಚ್ಚ ಹಸಿರು ಹುಲ್ಲುಗಾವಲು ಮನಸ್ಸಿಗೆ ಮುದ ನೀಡುತ್ತದೆ.
ಇದನ್ನೂ ಓದಿ: ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ