‘ದಿ ರಾಮೇಶ್ವರಮ್ ಕೆಫೆ’ಯಲ್ಲಿ ಸ್ಪೋಟ: ಫುಡ್ ವ್ಲಾಗರ್ಗಳಿಗೆ ಸಿಹಿ-ಕಹಿ ಚಂದ್ರು ಮನವಿ
The Rameshwaram cafe: ‘ದಿ ರಾಮೇಶ್ವರಮ್ ಕೆಫೆ’ ಹೋಟೆಲ್ನಲ್ಲಿ ಆದ ಸ್ಪೋಟವನ್ನು ಖಂಡಿಸಿರುವ ನಟ, ಫುಡ್ ವ್ಲಾಗರ್ ಸಿಹಿ-ಕಹಿ ಚಂದ್ರು, ಫುಡ್ ವ್ಲಾಗರ್ಗಳು ‘ದಿ ರಾಮೇಶ್ವರಮ್ ಕೆಫೆ’ಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದಿದ್ದಾರೆ.
‘ದಿ ರಾಮೇಶ್ವರಮ್ ಕೆಫೆ’ಯಲ್ಲಿ (The Rameshwaram Cafe) ಬಾಂಬ್ ಸ್ಪೋಟವಾದ ಸುದ್ದಿ ಬೆಂಗಳೂರಿಗರನ್ನು ದಿಗ್ಬ್ರಮೆಗೆ ದೂಡಿದೆ. ಬಾಂಬ್ ಸ್ಪೋಟದ ರೂವಾರಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಇದರ ನಡುವೆ ಆಹಾರ ಪ್ರೇಮಿ, ಫುಡ್ ವ್ಲಾಗರ್ ಸಹ ಆಗಿರುವ ನಟ ಸಿಹಿ ಕಹಿ ಚಂದ್ರು, ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ‘ದಿ ರಾಮೇಶ್ವರಮ್ ಕೆಫೆ’ಗೆ ಬಾಂಬ್ ಇಟ್ಟಿರುವ ಘಟನೆಯನ್ನು ನಾವೆಲ್ಲರೂ ಖಂಡಿಸಬೇಕಿದೆ. ಈ ಸಂಕಷ್ಟದ ಸಮಯದಲ್ಲಿ ಹೋಟೆಲ್ ಮಾಲೀಕರು, ಹೋಟೆಲ್ ಸಂಘಟನೆಯ ಜೊತೆಗೆ ಫುಡ್ ವ್ಲಾಗರ್ಗಳು ‘ದಿ ರಾಮೇಶ್ವರಮ್ ಕೆಫೆ’ಯ ಬೆಂಬಲಕ್ಕೆ ನಿಲ್ಲಬೇಕಿದೆ. ‘ದಿ ರಾಮೇಶ್ವರಮ್ ಕೆಫೆ’ ಮತ್ತೆ ಫಿನಿಕ್ಸ್ ಪಕ್ಷಿಯಂತೆ ಎದ್ದು ಬರಲು ನಾವು ಬೆಂಬಲ ನೀಡಬೇಕಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos