Pariksha Pe Charcha: ಹಿಂದಿ, ನೇಪಾಳಿ, ಬಂಗಾಳಿ ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ

Updated on: Feb 06, 2026 | 3:14 PM

ಪ್ರಧಾನಿ ನರೇಂದ್ರ ಮೋದಿ ಇಂದು ಪರೀಕ್ಷಾ ಪೆ ಚರ್ಚಾ 9ನೇ ಆವೃತ್ತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಜೊತೆ ಅನೌಪಚಾರಿಕ ಸಂವಾದ ನಡೆಸಿದರು. ಸಿಕ್ಕಿಂನ ವಿದ್ಯಾರ್ಥಿನಿಯೊಬ್ಬಳು ಹಿಂದಿ, ನೇಪಾಳಿ ಮತ್ತು ಬಂಗಾಳಿ ಎಂಬ ಮೂರು ಭಾಷೆಗಳಲ್ಲಿ 'ಹಮಾರ ಭಾರತ್ ಭೂಮಿ' ಎಂಬ ದೇಶಭಕ್ತಿ ಗೀತೆಯನ್ನು ರಚಿಸಿರುವುದಾಗಿ ಹಂಚಿಕೊಂಡಳು. ಇದು ಒಂದು ದೇಶಭಕ್ತಿ ಗೀತೆಯಾಗಿದೆ.

ನವದೆಹಲಿ, ಫೆಬ್ರವರಿ 6: ಇಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಜೊತೆ ಪರೀಕ್ಷಾ ಪೆ ಚರ್ಚಾ (Pariksha Pe Charcha) ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯ ಮುಂದೆ ಸಿಕ್ಕಿಂನ ಹುಡುಗಿಯೊಬ್ಬಳು ಹಿಂದಿ, ನೇಪಾಳಿ ಮತ್ತು ಬಂಗಾಳಿ ಭಾಷೆಗಳಲ್ಲಿ ತಾನೇ ಬರೆದ ‘ಹಮಾರ ಭಾರತ್ ಭೂಮಿ’ ಎಂಬ ದೇಶಭಕ್ತಿ ಗೀತೆಯೊಂದನ್ನು ಹಾಡುವ ಮೂಲಕ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ತಾನು 3 ಭಾಷೆಗಳಲ್ಲಿ ಹಾಡು ಬರೆದಿದ್ದೇನೆ ಎಂದು ಆಕೆ ಹೇಳಿದಾಗ ಸಂತೋಷಗೊಂಡ ಪ್ರಧಾನಿ ಮೋದಿ, ‘ನಿನಗೆ ಕವಿತೆ ಬರೆಯುವ ಅಭ್ಯಾಸವಿದೆಯೇ? ನಿನಗೆ ಬರವಣಿಗೆ ಎಂದರೆ ಇಷ್ಟವೇ?’ ಎಂದು ಕೇಳಿದರು. ಅದಕ್ಕೆ ಹೌದು ಎಂದ ಆ ಬಾಲಕಿ ಸುಶ್ರಾವ್ಯವಾಗಿ ತಾನು ಬರೆದ ಹಾಡನ್ನು ಹಾಡಿದಾಗ ಮೋದಿ ಹಾಗೂ ಇತರೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಆಕೆಯನ್ನು ಪ್ರೋತ್ಸಾಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಪರೀಕ್ಷಾ ಪೆ ಚರ್ಚಾ 9ನೇ ಆವೃತ್ತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಜೊತೆ ಅನೌಪಚಾರಿಕ ಸಂವಾದ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 06, 2026 03:10 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More