ಜನಪ್ರಿಯತೆ ಮತ್ತು ಬೇಡಿಕೆಯ ರೇಸ್​ನಲ್ಲಿ ಬಂಗಾರವನ್ನು ಹಿಂದಿಕ್ಕುತ್ತಿರುವ ಬೆಳ್ಳಿ! ಯುವತಿಯರಲ್ಲೂ ಹೆಚ್ಚಿದ ಕ್ರೇಜ್!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 18, 2021 | 6:12 PM

ಕಳ್ಳೆ ಬೀಜವನ್ನು (ಶೇಂಗಾ) ಬಡವನ ಬಾದಾಮಿ ಎನ್ನುವ ಹಾಗೆ ಬೆಳ್ಳಿಯನ್ನು ಬಡವನ ಬಂಗಾರ ಎನ್ನುತ್ತಾರೆ. ಆದರೆ ಈಗಿನ ದಿನಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಉಳ್ಳವರೂ ಅದನ್ನು ಚಿನ್ನದಂತೆ ಪರಿಗಣಿಸುತ್ತಿದ್ದಾರೆ.

ಮಹಿಳೆಯರ ಧರಿಸುವ ಆಭರಣಗಳಲ್ಲಿ ಚಿನ್ನಕ್ಕಿರುವ ಜನಪ್ರಿಯತೆ ಖಂಡಿತವಾಗಿಯೂ ಬೆಳ್ಳಿಗಿಲ್ಲ. ಭಾರತದಲ್ಲಿ ಈಗ ಹಬ್ಬಗಳ ಸೀಸನ್ ಆರಂಭವಾಗಿದೆ. ಹಾಗಾಗಿ ಚಿನ್ನ-ಬೆಳ್ಳಿ ಆಭರಣಗಳ ಸಂತೆ ಸಹ ಜೋರಾಗಿ ನಡೆಯುತ್ತಿದೆ. ಹಬ್ಬಗಳಿಗೆ ಸ್ತ್ರೀಯರು ಬಟ್ಟೆಗಳೊಂದಿಗೆ ಆಭರಣ ಕೊಳ್ಳವುದನ್ನೂ ಇಷ್ಟಪಡುತ್ತಾರೆ. ಆಭರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಅಭಿರುಚಿ ಮತ್ತು ಟ್ರೆಂಡ್ ಬದಲಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಹೌದು, ಚಿನ್ನ ಮತ್ತು ಬೆಳ್ಳಿ ಆಭರಣಗ ರೇಸ್ನಲ್ಲಿ ಬಿಳಿ ಲೋಹ ಹಳದಿ ಲೋಹವನ್ನು ಹಿಂದಿಕ್ಕುತ್ತಿದೆ ಅಂತ ಚಿನಿವಾರ ಪೇಟೆಯಿಂದ ಲಭ್ಯವಾಗುತ್ತಿರುವ ವರದಿಗಳು ಹೇಳುತ್ತಿವೆ.

2020-21 ರ ಸಾಲಿನಲ್ಲಿ ಆಭರಣಗಳಿಗೆ ಬೇಡಿಕೆ ಕಡಿಮೆಯಾಗಿತ್ತು ಅಂತ ವರದಿಯೊಂದು ಹೇಳಿದೆ. ಪ್ರಾಯಶಃ ಅದು ಕೋವಿಡ್-19 ಪೀಡೆಯಿಂದಿರಬಹುದು. ಸರಿ ಬೆಳ್ಳಿ ವಿಷಯಕ್ಕೆ ಬರೋಣ. ಈ ಲೋಹಕ್ಕೆ ಹಿಂದೂ ಸಂಪ್ರದಾಯಗಳಲ್ಲಿ ಹೆಚ್ಚಿನ ಮಹತ್ವವಿದೆ. ಸಾಮಾನ್ಯವಾಗಿ ಪೂಜೆಗೆ ಉಪಯೋಗಿಸುವ ದೀಪಗಳು ಬೆಳ್ಳಿಯವೇ ಆಗಿರುತ್ತವೆ. ಮದುವೆ ಸಮಾರಂಭ, ಹುಟ್ಟು ಹಬ್ಬ, ನಾಮಕರಣ ಮೊದಲಾದ ಸಂದರ್ಭಗಳಲ್ಲಿ ಬೆಳ್ಳಿ ಒಡವೆ, ಪಾತ್ರೆಗಳನ್ನು ನೀಡುವ ಸಂಪ್ರದಾಯ ಶತಮಾನಗಳಿಂದ ಜಾರಿಯಲ್ಲಿದೆ. ಬೆಳ್ಳಿಯು ಬಂಗಾರ ಮತ್ತು ಪ್ಲ್ಲಾಟಿನಂಗಳಿಗಿಂತ ಅಗ್ಗ ದರದಲ್ಲಿ ಸಿಗುತ್ತದೆ ಮತ್ತು ಅದನ್ನು ಬೇಕಾಗುವ ರೀತಿಯಲ್ಲಿ ಮೌಲ್ಡ್ ಮಾಡಿ ಸುಂದರವಾದ ಆಭರಣಗಳನ್ನು ತಯಾರಿಸಬಹುದಾಗಿದೆ.

ಕಳ್ಳೆ ಬೀಜವನ್ನು (ಶೇಂಗಾ) ಬಡವನ ಬಾದಾಮಿ ಎನ್ನುವ ಹಾಗೆ ಬೆಳ್ಳಿಯನ್ನು ಬಡವನ ಬಂಗಾರ ಎನ್ನುತ್ತಾರೆ. ಆದರೆ ಈಗಿನ ದಿನಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಉಳ್ಳವರೂ ಅದನ್ನು ಚಿನ್ನದಂತೆ ಪರಿಗಣಿಸುತ್ತಿದ್ದಾರೆ. ಈ ವಿಡಿಯೋನಲ್ಲಿ ಯುವತಿಯರು ಧರಿಸಿರುವ ಬೆಳ್ಳಿಯ ಆಭರಣಗಳನ್ನು ನೋಡಿ. ಒಂದಕ್ಕಿಂತ ಒಂದು ಸೊಗಸಿನ ವಿನ್ಯಾಸಗಳು. ಮಾಡೆಲ್ಗಳ ಸೌಂದರ್ಯವನ್ನು ಅವರು ಧರಿಸಿರುವ ಬೆಳ್ಳಿ ಆಭರಣಗಳು ಇಮ್ಮಡಿಗೊಳಿಸಿವೆ. ಹೊಸ ತಲೆಮಾರಿನ ಯುವತಿಯರು ಬೆಳ್ಳಿಯ ಆಭರಣಗಳ ಮೇಲೆ ವಿಪರೀತ ಅನಿಸುವಷ್ಟು ಕ್ರೇಜ್ ಬೆಳಸಿಕೊಂಡಿದ್ದಾರೆ.

ನಿಮಗೆ ಆಶ್ಚರ್ಯವಾಗಬಹುದು, ಜನ ಬ್ಯಾಂಕ್ಗಳಿಂದ ಗೋಲ್ಡ್ ಲೋನ್ ತೆಗೆದು ಚಿನ್ನದ ಆಭರಣಗಳನ್ನು ಖರೀದಿಸುತ್ತಿದ್ದಾರೆ. ಭಾರತದಲ್ಲಿ ವಿವಾಹಿತ ಮಹಿಳೆಯರು ಬೆಳ್ಳಿ ಕಾಲುಂಗುರ ಧರಿಸುತ್ತಾರೆ. ಆದರೆ ಬೆಳ್ಳಿ ಆಭರಣಳು ಈಗ ಅವರು ಮೈ ತುಂಬಾ ಕಂಗೊಳಿಸುತ್ತಿವೆ.

ಇದನ್ನೂ ಓದಿ: Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್