ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಮೇಕೆದಾಟು ಯೋಜನೆಗೆ ಅನುಮೋದನೆ ತರಲಿ: ಡಿಕೆ ಸುರೇಶ್

Updated on: Jul 05, 2025 | 5:38 PM

ಮಂಡ್ಯದ ಜನ ಕೋಳೀನ ಕೇಳಿ ಮೆಣಸು ಅರೆಯಲ್ಲ ಅಂತ ಹೇಳುತ್ತಾರೆ, ತಮ್ಮ ಭಾಗದಲ್ಲಿ ಕೋಳೀನ ಕೇಳಿ ಮಸಾಲೆ ಅರೆಯಲ್ಲ ಅನ್ನುತ್ತಾರೆ, ಹಾಗಾಗಿ ರಾಜ್ಯ ಸರ್ಕಾರ ಏನು ಮಾಡಬೇಕು ಅಂತ ಕುಮಾರಸ್ವಾಮಿಯವರನ್ನು ಕೇಳಬೇಕಾದ ಅವಶ್ಯಕತೆಯಿಲ್ಲ ಎಂದು ಸುರೇಶ್ ಹೇಳಿದರು. ಕುಮಾರಸ್ವಾಮಿ ಕಾಂಗ್ರೆಸ್ ಅನ್ನು ದೂರೋದು, ಕಾಂಗ್ರೆಸ್ ಕುಮಾರಸ್ವಾಮಿಯನ್ನು-ಮೇಕೆದಾಟು ಯೋಜನೆ ಕನಸು ಈಡೇರಿದಂತೆಯೇ!

ದೇವನಹಳ್ಳಿ, ಜುಲೈ 5: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೈಸೂರಲ್ಲಿ ಮೇಕೆದಾಟು ಯೋಜನೆ ಅರಂಭವಾಗದ ಹಿನ್ನೆಲೆ ರಾಜ್ಯ ಸರ್ಕಾರವನ್ನು ಟೀಕಿಸಿರುವುದಕ್ಕೆ ಕಾಂಗ್ರೆಸ್ ನಾಯಕರಲ್ಲಿ ಯಾರಾದರೂ ಪ್ರತಿಕ್ರಿಯೆ ನೀಡುವುದನ್ನು ನಿರೀಕ್ಷಿಸಲಾಗಿತ್ತು. ಮಾಜಿ ಸಂಸದ ಮತ್ತು ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ದೇವನಹಳ್ಳಿಯಲ್ಲಿ ಅದನ್ನು ಮಾಡಿದ್ದಾರೆ. ವರದಿಗಾರರೊಂದಿಗೆ ಮಾತಾಡಿದ ಅವರು ಕುಮಾರಸ್ವಾಮಿ ಸಹ ಮುಖ್ಯಮಂತ್ರಿಯಾಗಿದ್ದವರು, ಮತ್ತು ಅಸೆಂಬ್ಲಿ ಚುನಾವಣೆ ಸಮಯದಲ್ಲಿ ತಮ್ಮನ್ನು ಅಧಿಕಾರಕ್ಕೆ ತಂದರೆ ಹತ್ತು ನಿಮಿಷಗಳಲ್ಲಿ ಯೋಜನೆಗೆ ಅನುಮೋದನೆ ತರುತ್ತೇನೆ ಅಂತ ಹೇಳಿದ್ದರು, ಈಗ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ, ಅನುಮೋದನೆ ತರಲಿ ಎಂದರು.

ಇದನ್ನೂ ಓದಿ:   ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ