ಗಾಯಕ ನವೀನ್ ಸಜ್ಜು ಪ್ರಕಾರ ’ಕನ್ನಡ ಬಿಗ್ ಬಾಸ್ ಸೀಸನ್ 8’ ಗೆಲ್ಲೋರು ಇವರೇ
ಬಿಗ್ ಬಾಸ್ ಫಿನಾಲೆ ಯಾರು ಗೆಲ್ಲಬೇಕು ಮತ್ತು ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ನವೀನ್ ಸಜ್ಜು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಅವರ ವಿಶೇಷ ಸಂದರ್ಶನ.
ಕನ್ನಡ ಬಿಗ್ ಬಾಸ್ ಸೀಸನ್ 8ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮೊದಲು ವೀಕ್ಷಕರಿಗೆ ಸಾಕಷ್ಟು ಅಚ್ಚರಿಗಳು ಸಿಗುತ್ತಿವೆ. ಆಗಸ್ಟ್ 4ರ ಎಪಿಸೋಡ್ನಲ್ಲಿ ದಿವ್ಯಾ ಸುರೇಶ್ ಎಲಿಮಿನೇಟ್ ಆದರು. ಕೊನೆಯ ಬಾರಿಗೆ ಸ್ಪರ್ಧಿಗಳಿಗೆ ಬಾಯ್ ಹೇಳಲೂ ಅವರಿಂದ ಸಾಧ್ಯವಾಗಿಲ್ಲ. ಸದ್ಯ, ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಅತಿ ಹೆಚ್ಚು ವೋಟ್ ಪಡೆದವರು ಗೆಲ್ಲುತ್ತಾರೆ. ಇವರಲ್ಲಿ ಗೆಲ್ಲೋದು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ.
ಈ ಕುರಿತಂತೆ ನವೀನ್ ಸಜ್ಜು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಫಿನಾಲೆ ಯಾರು ಗೆಲ್ಲಬೇಕು ಮತ್ತು ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ನವೀನ್ ಸಜ್ಜು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಅವರ ವಿಶೇಷ ಸಂದರ್ಶನ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಸುದೀಪ್ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ
Loading...
Unable to load recommendations.
Follow Us
