ತುಮಕೂರು ನಗರಕ್ಕೆ ನಡೆದುಬಂದ ಕಾಡುಪಾಪ! ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟುಬಂದ ಅರಣ್ಯ ಸಿಬ್ಬಂದಿ

ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಬಂದಿ ಪ್ರಾಣಿಯನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಜನ ವಿಶೇಷವಾಗಿರುವ ಕಾಡುಪಾಪ ಪ್ರಾಣಿಯನ್ನು ನೋಡಲು ಮುಗಿಬಿದ್ದರು. ಈ ಮಧ್ಯೆ, ದಿಲೀಪ್ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿಯಿಂದ ಕಾಡುಪಾಪನನ್ನು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ (devarayanadurga forest) ಬಿಡಲಾಗಿದೆ (Kadupapa Rescue and Release).

sadhu srinath

|

Jan 03, 2022 | 9:20 AM

ತುಮಕೂರು: ತುಮಕೂರಿನಲ್ಲಿ ಅಪರೂಪದ ಕಾಡುಪಾಪ (Slender Loris) ಪತ್ತೆಯಾಗಿದೆ. ನಗರದ ರಂಗಾಪುರದ ಕಾರ್ಖಾನೆ ಕ್ವಾರ್ಟರ್ಸ್ ಬಳಿ ಈ ಅಪರೂಪದ ಕಾಡುಪಾಪ ಪತ್ತೆಯಾಗಿದೆ. ತಕ್ಷಣ ಅರಣ್ಯ ಸಿಬ್ಬಂದಿ ಕಾಡುಪಾಪನನ್ನು ದೇವರಾಯನದುರ್ಗದ ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿದ್ದಾರೆ. ತುಮಕೂರಿನ ರಂಗಾಪುರದ ಕಾರ್ಖಾನೆ ಕ್ವಾರ್ಟರ್ಸ್ ಬಳಿ ಮರದ ಮೇಲೆ ಕಾಡುಪಾಪ ಕುಳಿತಿದ್ದ. ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಬಂದಿ ಪ್ರಾಣಿಯನ್ನು ರಕ್ಷಣೆ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಜನ ವಿಶೇಷವಾಗಿರುವ ಕಾಡುಪಾಪ ಪ್ರಾಣಿಯನ್ನು ನೋಡಲು ಮುಗಿಬಿದ್ದರು. ಈ ಮಧ್ಯೆ, ದಿಲೀಪ್ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿಯಿಂದ ಕಾಡುಪಾಪನನ್ನು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ (devarayanadurga forest) ಬಿಡಲಾಗಿದೆ (Kadupapa Rescue and Release).

Follow us on

Click on your DTH Provider to Add TV9 Kannada