ಉತ್ತಮ ಫೀಚರ್​​​ಗಳು, ನೋಡಲು ಆಕರ್ಷಕವೆನಿಸುವ ಸ್ಪಾರ್ಟ್​​ಫೋನ್​ಗಳು ರೂ 10,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2021 | 8:42 PM

ನಮ್ಮ ಬಜೆಟ್ ಗೆ ಫಿಟ್ ಆಗುವ, ಉತ್ತಮ ಫೀಚರ್ಗಳನ್ನೊಳಗೊಂಡ ಮತ್ತು ನೋಡಲು ದುಬಾರಿಯಂತೆ ಕಾಣುವ ಹಲವು ಬ್ರ್ಯಾಂಡ್​ಗಳು ಮಾರ್ಕೆಟ್ ನಲ್ಲಿ ಸಿಗುತ್ತಿವೆ. ಈ ಫೋನ್​ಗಳು ಮಧ್ಯಮವರ್ಗದ ಕುಟುಂಬಗಳಿಗೆ ವರದಾನವೆಂದರೆ ತಪ್ಪಾಗಲಾರದು.

ಇದು ಸ್ಪಾರ್ಟ್​​ಫೋನ್ ಗಳ ಕಾಲ ಮಾರಾಯ್ರೇ. ಬೇಸಿಕ್ ಮಾಡೆಲ್ ಫೋನ್​ಗಳು ಈಗ ಗ್ರಾಮೀಣ ಭಾಗದ ಹಿರಿಯರಲ್ಲಿ ಮಾತ್ರ ಕಾಣಬಹುದು. ಅವರು ಸಹ ಈ ಪೋನು ಪೋಟೂ ತೆಗೀತದೇನಾ… ಅಂತ ಕೇಳುತ್ತಾರೆ. ಸ್ಪಾರ್ಟ್​​ಫೋನ್ ಈಗ ಅವಶ್ಯಕತೆಯೂ ಹೌದು ಮತ್ತು ಅನಿವಾರ್ಯವೂ ಹೌದು. ಕೊವಿಡ್-19 ಪಿಡುಗಿನಿಂದಾಗಿ ಅನೇಕ ಮಕ್ಕಳು ಮನೆಯಲ್ಲಿ ಕೂತು ಆನ್ ಲೈನಲ್ಲಿ ತರಗತಿಗಳನ್ನು ಅಟೆಂಡ್ ಮಾಡುತ್ತಿದ್ದಾರೆ. ಅವರಿಗೆ ಕಡ್ಡಾಯವಾಗಿ ಫೋನ್ ಬೇಕು. ಆದರೆ, ಅವರಿಗೆ ಕಡಿಮೆ ಬಜೆಟ್ ಫೋನ್ ಕೊಡಿಸಿದರೆ ನಡೆಯದು, ಎಲ್ಲಾ ಫೀಚರ್ಗಳಿರುವ, ಸೆಲ್ಫೀಗಾಗಿ ಮತ್ತು ಫೋಟೋ ತೆಕ್ಕೊಳ್ಳಲು ಹೆಚ್ಚಿನ ಮೆಗಾ ಪಿಕ್ಸೆಲ್ ನ ಕೆಮೆರಾ ಇರುವ ಫೋನ್ ಬೇಕು. ನೋಡಲು ಅಂದವಾಗಿರಬೇಕು ಮತ್ತು ದುಬಾರಿ ಅನಿಸಬೇಕು, ಹೌದು ತಾನೆ?

ಗಮನಿಸಬೇಕಾದ ಸಂಗತಿ ಏನೆಂದರೆ ನಮ್ಮ ಬಜೆಟ್ ಗೆ ಫಿಟ್ ಆಗುವ, ಉತ್ತಮ ಫೀಚರ್ಗಳನ್ನೊಳಗೊಂಡ ಮತ್ತು ನೋಡಲು ದುಬಾರಿಯಂತೆ ಕಾಣುವ ಹಲವು ಬ್ರ್ಯಾಂಡ್​ಗಳು ಮಾರ್ಕೆಟ್ ನಲ್ಲಿ ಸಿಗುತ್ತಿವೆ. ಈ ಫೋನ್​ಗಳು ಮಧ್ಯಮವರ್ಗದ ಕುಟುಂಬಗಳಿಗೆ ವರದಾನವೆಂದರೆ ತಪ್ಪಾಗಲಾರದು. 2 ಜಿಬಿ ರ್ಯಾಮ್ ಮತ್ತು 32 ಜಿಬಿ ಮೆಮೊರಿ ಇರುವ ಜಿಯೋ ನೆಕ್ಸ್ಟ್ ಸ್ಪಾರ್ಟ್​​ಫೋನ್ ರೂ 6,499 ಗಳಿಗೆ ಸಿಗುತ್ತಿದೆ.

ರೀಯಲ್ಮಿ ನಾರ್ಜೋ ಸ್ಪಾರ್ಟ್​​ಫೋನ್ ಆನ್ ಲೈನಲ್ಲಿ ಕ್ಲಾಸ್ ಅಟೆಂಡ್ ಮಾಡುವ ವಿದ್ಯಾರ್ಥಿಗಳಿಗೆ ಬಹಳ ಯೋಗ್ಯವಾದ ಫೋನ್ ಅಂತ ಹೇಳಲಾಗುತ್ತಿದೆ. ಇದು ಹೆಚ್ಚು ಕಡಿಮೆ ಎಲ್ಲ ಸ್ಪೆಸಿಫಿಕೇಷನ್​ಗಳನ್ನು ಹೊಂದಿದೆ ಮತ್ತು ಬೆಲೆಯನ್ನು ನೋಡುವುದಾದರೆ, ರೂ. 10,000 ಕ್ಕಿಂತ ಕಡಿಮೆಗೆ ಸಿಗಲಿದೆ.

ಮೈಕ್ರೋಮ್ಯಾಕ್ಸ್ ಬ್ರ್ಯಾಂಡ್ ನೆನೆಪಿದೆ ತಾನೆ? ಕೆಲ ದಿನಗಳ ಮಟ್ಟಿಗೆ ಅದು ಸ್ತಬ್ಧವಾಗಿದ್ದು ನಿಜ. ಆದರೆ ಈಗ ಹೊಸ ರೂಪದೊಂದಿಗೆ ಬಂದಿದೆ. 13 ಮೆಗಾ ಪಿಕ್ಸೆಲ್ ಕೆಮೆರಾ ಮತ್ತು ಹಲವಾರು ಫೀಚರ್​ಗಳನ್ನು ಹೊಂದಿರುವ ಈ ಫೋನಿನ ಬೆಲೆ ಕೂಡ ರೂ. 10,000 ಕ್ಕಿಂತ ಕಡಿಮೆ.

ಇದನ್ನೂ ಓದಿ:  Viral Video: ಹಸಿ ಮೆಣಸಿನಕಾಯಿ ಐಸ್​ ಕ್ರೀಮ್​ ತಿಂದಿದ್ದೀರಾ? ವೈರಲ್ ಆಯ್ತು ಹೊಸ ರೆಸಿಪಿಯ ವಿಡಿಯೋ