ಉಡುಪಿ: ಬೈಕ್ನ ಹೆಡ್ ಲೈಟ್ ವೈಸರ್‌ನಲ್ಲಿ ಹಾವು ಪ್ರತ್ಯಕ್ಷ, ವಿಡಿಯೋ ನೋಡಿ
ಉಡುಪಿಯ ಕಿನ್ನಿ ಮುಲ್ಕಿ ಬಳಿಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ ಬೈಕ್ನ ಹೆಡ್ ಲೈಟ್ ವೈಸರ್‌ನಲ್ಲಿ ಹಾವು ಪ್ರತ್ಯಕ್ಷವಾಗಿದೆ. ಕೆಲವು ದಿನಗಳ ಹಿಂದೆ ಅಷ್ಟೇ, ಮೊಟ್ಟೆಯಿಂದ ಹೊರಬಂದಿದ್ದ ಹೆಬ್ಬಾವು ಮರಿ ಬೈಕ್ನಲ್ಲಿ ಪ್ರತ್ಯಕ್ಷವಾಗಿದೆ. ಸದ್ಯ ಉರಗ ರಕ್ಷಕ ಪ್ರಾಣೇಶ್ ಅವರು ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.
ಉಡುಪಿ, ಜುಲೈ.03: ನಡು ರಸ್ತೆಯಲ್ಲಿ ಬೈಕ್ನ ಹೆಡ್ ಲೈಟ್ ವೈಸರ್‌ನಲ್ಲಿ ಹಾವು (Snake) ಪ್ರತ್ಯಕ್ಷವಾಗಿದೆ. ಉಡುಪಿಯ ಕಿನ್ನಿ ಮುಲ್ಕಿ ಬಳಿಯ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಯುವಕ ಕೆಲಸಕ್ಕೆ ತೆರಳಿದ್ದ. ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಬೈಕ್ ಏರಿದ ಯುವಕ ಬೈಕ್ ಸ್ಟಾರ್ಟ್ ಮಾಡಿ ಹೊರಡಬೇಕು ಎನ್ನುವಾಗ ವೈಸರ್ ಒಳಗೆ ಹಾವು ಪ್ರತ್ಯಕ್ಷವಾಗಿದೆ. ಹೆಡ್ ಲೈಟ್ ವೈಸರ್‌ನಲ್ಲಿ ಹಾವು ನೋಡಿ ಬೆಚ್ಚಿಬಿದ್ದ ಯುವಕ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ, ಹಾವಿನ ಬಗ್ಗೆ ತಿಳಿಸಿದ್ದು ಉರಗ ರಕ್ಷಕ ಪ್ರಾಣೇಶ್ ಮೂಲಕ ಕಾರ್ಯಾಚರಣೆ ನಡೆದಿದೆ. ಪ್ರಾಣೇಶ್ ಹಾವಿನ ರಕ್ಷಣೆ ಮಾಡಿದ್ದು ಕೆಲವು ದಿನಗಳ ಹಿಂದೆ ಅಷ್ಟೇ, ಮೊಟ್ಟೆಯಿಂದ ಹೊರಬಂದಿದ್ದ ಹೆಬ್ಬಾವು ಮರಿ ಇದಾಗಿದೆ. ಮಳೆಗಾಲದ ಸಮಯದಲ್ಲಿ ಬಿಸಿ ಜಾಗ ಹುಡುಕಿ ಬೈಕ್ ಹೆಡ್ ವೈಸರ್ ಸೇರಿದ್ದ ಹೆಬ್ಬಾವು ಮರಿಯನ್ನು ಹತ್ತಿರದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ

KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ

ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್

ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
