ಸ್ಕೂಟರಿನ ಡಿಕ್ಕಿಯಲ್ಲಿ ಪವಡಿಸಿದ್ದ ನಾಗರ ಹಾವನ್ನು ಹಿಡಿದ ಉರಗ ತಜ್ಞ; ಆಮೇಲೇನಾಯ್ತು?
ಕೂಡಲೇ ಸ್ಥಳಕ್ಕೆ ಆಗಮಿಸಿರುವ ಉರಗ ತಜ್ಞ ನಾಗೇಂದ್ರ ಅವರು ಸರ್ಪವನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಸ್ಕೂಟರ್ ಡಿಕ್ಕಿಯೊಳಗಿದ್ದ ಹೆಲ್ಮೆಟ್ ಒಳಭಾಗದಲ್ಲಿ ಸರ್ಪ ಪವಡಿಸಿತ್ತು ಅನಿಸುತ್ತದೆ.
ಮನೆ ಮುಂದೆ ಪಾರ್ಕ್ ಮಾಡಿದ ಕಾರಿನ ಬಾನೆಟ್ನೊಳಗೆ ಅಥವಾ ಸ್ಕೂಟರಿನ ಡಿಕ್ಕಿಯೊಳಗೆ ಸರ್ಪಗಳು ಹೊಕ್ಕು ವಾಹನಗಳ ಮಾಲೀಕರಿಗೆ ತಮ್ಮ ಉಪಸ್ಥಿತಿಯ ಬಗ್ಗೆ ಗೊತ್ತಾಗುವವರಗೆ ರೆಸ್ಟ್ ಮಾಡುವ ದೃಶ್ಯಗಳನ್ನು ನಾವೆಲ್ಲ ಹಲವಾರು ಬಾರಿ ನೋಡಿದ್ದೀವೆ. ನಮ್ಮ ಓದುಗರ ಸ್ವಂತ ಅನುಭವದಲ್ಲಿ ಇಂತದೊಂದು ಘಟನೆ ನಡೆದಿರಲೂಬಹುದು. ಯಾರಾದರೂ ನೋಡಿಲ್ಲವಾದರೆ, ವಿಡಿಯೋ ಇಲ್ಲಿದೆ. ಈ ಘಟನೆ ಜರುಗಿರೋದು ಬೆಂಗಳೂರು ಉತ್ತರ ಜಿಲ್ಲೆಯ ಚಿಕ್ಕಬಿದರಕಲ್ಲು ಪ್ರದೇಶದಲ್ಲಿ. ಚಿಕ್ಕಬಿದರಕಲ್ಲು ಈಗ ಬಹಳಷ್ಟು ಡೆವಲಪ್ ಆಗಿದೆ. ಸೊಗಸಾದ ಬಡಾವಣೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ತಲೆಯೆತ್ತಿವೆ. ಓಕೆ, ವಿಷಯ ಅದಲ್ಲ, ಅದು ಉರಗ ಮಹಾಶಯರದ್ದು. ಇಲ್ಲಿ ಕಾಣಿತ್ತಿರುವ ಸ್ಕೂಟರ್ನೊಳಗೆ ನಾಗರಹಾವೊಂದು ಸೇರಿಕೊಂಡು ಬಿಟ್ಟಿದೆ.
ಅಸಲಿಗೆ ಇಲ್ಲಿನ ಕೆಲ ನಿವಾಸಿ ಕಣ್ಣಮುಂದೆಯೇ ಅದು, ಹರಿದಾಡುತ್ತಾ ಬಂದಿದೆ. ಇಲ್ಲೊಬ್ಬ ಸದ್ಗೃಹಸ್ಥರು ನಿಂತಿದ್ದಾರಲ್ಲ (ವಿಡಿಯೋದ ಅಂತಿಮ ಭಾಗದಲ್ಲಿ ಅವರು ಮಾತಾಡಿದ್ದಾರೆ) ಅವರ ಪಕ್ಕದಿಂದ ಸರಿದು ಸ್ಕೂಟರ್ ಡಿಕ್ಕಿಯೊಳಗೆ ಸೇರಿಕೊಂಡಿದೆ. ಇಲ್ಲಿ ನೆರೆದಿರುವ ನಿವಾಸಿಗಳು ಅದಕ್ಕೆ ತೊಂದರೆ ನೀಡುವ ಪ್ರಯತ್ನ ಮಾಡದೆ, ಉರಗ ತಜ್ಞರಿಗೆ ಫೋನ್ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿರುವ ಉರಗ ತಜ್ಞ ನಾಗೇಂದ್ರ ಅವರು ಸರ್ಪವನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಸ್ಕೂಟರ್ ಡಿಕ್ಕಿಯೊಳಗಿದ್ದ ಹೆಲ್ಮೆಟ್ ಒಳಭಾಗದಲ್ಲಿ ಸರ್ಪ ಪವಡಿಸಿತ್ತು ಅನಿಸುತ್ತದೆ. ನಾಗೇಂದ್ರ ಅವರು ಡಿಕ್ಕಿ ಓಪನ್ ಮಾಡಿದ ಮೇಲೆ ಅದು ತಪ್ಪಿಸಿಕೊಳ್ಳುವ ಪ್ರಯತ್ನಿಸುತ್ತಿರುವಾಗಲೇ ನಾಗೇಂದ್ರ ಅದರ ಬಾಲ ಹಿಡಿದು ಹೊರಗೆಳೆದಿದ್ದಾರೆ. ಅದನ್ನು ಒಂದು ಡಬ್ಬದೊಳಗೆ ಹಾಕಿ ನಂತರದ ಹತ್ತಿರದ ಹೆಸರುಘಟ್ಟ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಉರುಗ ತಜ್ಞರು ಯಾವತ್ತೂ ತಾವು ಹಿಡಿದ ಹಾವನ್ನು ಕೊಲ್ಲುವುದಿಲ್ಲ. ಹಾವಿನ ವಾಸಕ್ಕೆ ಯೋಗ್ಯವಾದ ಸ್ಥಳಕ್ಕೆ ಅದನ್ನು ಸುರಕ್ಷಿತವಾಗಿ ಒಯ್ದು ಬಿಟ್ಟುಬಿಡುತ್ತಾರೆ. ನಾಗೇಂದ್ರ ಅವರು ಸಹ ಅದನ್ನೇ ಮಾಡಿದ್ದು.
ಇದನ್ನೂ ಓದಿ: IPL 2022: ಕಿಂಗ್ ಕೊಹ್ಲಿಗೆ ಹುಕ್ ಸ್ಟೆಪ್ ಹೇಳಿಕೊಟ್ಟ ಚಹಲ್ ಪತ್ನಿ ಧನಶ್ರೀ ವರ್ಮಾ! ವಿಡಿಯೋ ನೋಡಿ