ಇದನ್ನು ಓದುವ ಮೊದಲು ನಿಮ್ಮ ಸಾಮಾಜಿಕ ಜಾಲತಾಣಗಳ ಪಾಸ್​ವರ್ಡ್ ಸರಳವಾಗಿದೆಯಾ ಅಥವಾ ಜಟಿಲವಾಗಿದೆಯಾ ಅಂತ ಯೋಚಿಸಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 25, 2021 | 4:10 PM

ಭಾರತವೂ ಸೇರಿದಂತೆ, ಸಮೀಕ್ಷೆ ನಡೆಸಿದ 50 ರಾಷ್ಟ್ರಗಳ ಪೈಕಿ 43 ದೇಶದ ನಿವಾಸಿಗಳಲ್ಲಿ ಅನೇಕರು password ಪದವನ್ನೇ ತಮ್ಮ ಪಾಸ್​ವರ್ಡ್ ಮಾಡಿಕೊಂಡಿದ್ದಾರಂತೆ.

ಸಾಮಾಜಿಕ ಜಾಲತಾಣಗಳ ಅಕೌಂಟ್ಗಳು ಮತ್ತು ನೆಟ್ ಬ್ಯಾಂಕಿಂಗ್ ಗೆ ನಾವೆಲ್ಲ ಪಾಸ್​ವರ್ಡ್ ಗಳನ್ನು ಇಟ್ಟುಕೊಂಡಿರುತ್ತೇವೆ. ಆ ಪಾಸ್​ವರ್ಡ್ ಹಾಕಿದಾಗಲೇ ನಮ್ಮ ಅಕೌಂಟ್ಗಳು ಓಪನ್ ಆಗೋದು. ಅದರೆ ಸಮಸ್ಯೆ ಏನೆಂದರೆ, ನಾವು ಬಳಸುವ ಪಾಸ್​ವರ್ಡ್ ಗಳು ಹ್ಯಾಕರ್ ಮತ್ತು ಸೈಬರ್ ಕ್ರಿಮಿನಲ್ಗಳಿಗೆ ಅವುಗಳ ಜಾಡು ಹಿಡಿದು ಅಕೌಂಟ್ ಗಳನ್ನು ಹ್ಯಾಕ್ ಮಾಡುವುದು, ಹಣ ಸೈಫೋನ್ ಮಾಡುವುದು ಕಷ್ಟವೇ ಅಗುತ್ತಿಲ್ಲ. ನಾರ್ಡ್ ಹೆಸರಿನ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ, ನಮಗೆ ನೆನೆಪಿಟ್ಟುಕೊಳ್ಳಲು ಸುಲಭವಾಗಲಿ ಅಂತ ಸರಳವಾದಪಾಸ್​ವರ್ಡ್​ಗಳನ್ನು ನಾವು ಆಯ್ಕೆ ಮಾಡಿಕೊಳ್ಳುತ್ತಿರುವುದೇ ಸೈಬರ್ ಅಪರಾಧಗಳಿಗೆ ಕಾರಣವಾಗುತ್ತಿದೆ.

ಭಾರತವೂ ಸೇರಿದಂತೆ, ಸಮೀಕ್ಷೆ ನಡೆಸಿದ 50 ರಾಷ್ಟ್ರಗಳ ಪೈಕಿ 43 ದೇಶದ ನಿವಾಸಿಗಳಲ್ಲಿ ಅನೇಕರು password ಪದವನ್ನೇ ತಮ್ಮ ಪಾಸ್​ವರ್ಡ್ ಮಾಡಿಕೊಂಡಿದ್ದಾರಂತೆ. Abc 123, abcde12, ಇಲ್ಲವೇ ಕೇವಲ 12345678, 123456789, 123321 ಹೀಗೆ ಸುಲಭವಾಗಿ ಟ್ರ್ಯಾಕ್ ಮಾಡಬಹುದಾದ ಪಾಸ್​ವರ್ಡ್​ಗಳನ್ನು  ಜನ ಬಳಸುತ್ತಾರಂತೆ.

ಭಾರತದಲ್ಲಿ Krishna, ome, Ome Sairam, I love You, Ram, Bhagwan ಮೊದಲಾದ ಶಬ್ದಗಳನ್ನು ಬಳಸುವ ಲಕ್ಷಾಂತರ ಜನರಿದ್ದಾರಂತೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ sunshine, sunrise, sunset, lovely, darling, love you honey, sweetheart ಇಂಥ ಪದಗಳನ್ನು ಜನ ಪಾಸ್​ವರ್ಡ್​ಗಳಾಗಿ  ಬಳಸುತ್ತಾರಂತೆ. ಭಾರತದಲ್ಲಿ ತಮ್ಮ ಪತ್ನಿಯರ ಹೆಸರು, ಮನದನ್ನೆಯರು, ಮಕ್ಕಳ ಹೆಸರು ಬಳಸುವರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೆಲವರು ತಮ್ಮ ತಂದೆ ತಾಯಿಗಳ ಹೆಸರುಗಳನ್ನು ಸಹ ಬಳಸುತ್ತಾರೆ. ಇನ್ನು ರಾಷ್ಟ್ರದ ಬಗ್ಗೆ ಅಭಿಮಾನ ಇಟ್ಟುಕೊಂಡವರು India 123, Jai Hind ಪದಗಳನ್ನು ಬಳಸುವುದುಂಟು.

ಈ ಸಮೀಕ್ಷೆ ನಮಗೊಂದು ಎಚ್ಚರಿಕೆ ಮತ್ತು ಸಲಹೆಯನ್ನು ನೀಡುತ್ತಿದೆ. ನಮ್ಮಪಾಸ್​ವರ್ಡ್​ಗಳು ಟ್ರಿಕ್ಕಿಯಾಗಿರಬೇಕು. ನಮಗೆ ನೆನಪಿಟ್ಟುಕೊಳ್ಳಲು ಕೊಂಚ ಕಷ್ಟವಾಗಬಹುದು.

ಆದರೆ, ಆಕೌಂಟ್ ಗಳು ಹ್ಯಾಕ್ ಆಗದಂತೆ ಮತ್ತು ಹಣ ಕಳೆದುಕೊಳ್ಳದಂತಿರಲು ನಾವು ಸ್ವಲ್ಪ ಕಷ್ಟಪಡಬೇಕು ಮಾರಾಯ್ರೇ.

ಇದನ್ನೂ ಓದಿ:    ಅಯ್ಯಪ್ಪನ ಸನ್ನಿಧಿಯಲ್ಲಿ ಅಪ್ಪು; ನಟ ಪುನೀತ್ ಭಾವಚಿತ್ರ ಹೊತ್ತು ಶಬರಿಮಲೆ ಹತ್ತಿದ ಅಭಿಮಾನಿ- ವಿಡಿಯೋ ನೋಡಿ