ಫೇಸ್‌ಬುಕ್‌ನಲ್ಲಿ ಜಾಹೀರಾತು ಬಂದಾಗ ಕ್ಲಿಕ್ ಮಾಡಿದವ್ರ ಕಥೆ ಬಿಚ್ಚಿಟ್ಟ SP

Edited By:

Updated on: Oct 21, 2025 | 8:56 PM

ಐದು ವರ್ಷದ ಹಿಂದಿನ ಅಂದರೆ 2020ರ ಪ್ರಕರಣವನ್ನು ರಾಯಚೂರು ಪೊಲೀಸರು ಭೇದಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣದಲ್ಲಿ, ಆರೋಪಿಯಿಂದ ವಶಪಡಿಸಿಕೊಂಡ ಸುಮಾರು 18.29 ಲಕ್ಷ ರೂಪಾಯಿಗಳನ್ನು ಮಂಗಳವಾರ ಸಂಜೆ 6 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಂಚನೆಗೊಳಗಾದವರಿಗೆ ಹಿಂದಿರುಗಿಸಲಾಯಿತು

ರಾಯಚೂರು, (ಅಕ್ಟೋಬರ್ 21): ಐದು ವರ್ಷದ ಹಿಂದಿನ ಅಂದರೆ 2020ರ ಪ್ರಕರಣವನ್ನು ರಾಯಚೂರು ಪೊಲೀಸರು ಭೇದಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣದಲ್ಲಿ, ಆರೋಪಿಯಿಂದ ವಶಪಡಿಸಿಕೊಂಡ ಸುಮಾರು 18.29 ಲಕ್ಷ ರೂಪಾಯಿಗಳನ್ನು ಮಂಗಳವಾರ ಸಂಜೆ 6 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಂಚನೆಗೊಳಗಾದವರಿಗೆ ಹಿಂದಿರುಗಿಸಲಾಯಿತು. ರಾಯಚೂರು ನಗರದ ವಿದ್ಯಾನಗರ ನಿವಾಸಿ ಲಕ್ಷ್ಮೀಕಾಂತ್ ಅವರು 2020ರಲ್ಲಿ ಫೇಸ್‌ಬುಕ್‌ನಲ್ಲಿ ಟ್ರೇಡ್, MTFS ಜಾಹೀರಾತು ನೋಡಿ, ಹೆಚ್ಚಿನ ಲಾಭದ ಆಸೆಗೆ ಜಾಹೀರಾತಿನಲ್ಲಿದ್ದ ಇಮೇಲ್‌ಗೆ ಸಂಪರ್ಕಿಸಿ ಹಣ ಹೂಡಿಕೆ ಮಾಡಿ ಬಳಿಕ ಮೋಸ ಹೋಗಿದ್ದರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲಿಸರು, ಆರೋಪಿ ಹಾಗೂ ಆತನ ಸಂಬಂಧಿಕರ ಖಾತೆಗಳಿಂದ ಈ ಹಣವನ್ನು ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಪೇಸ್​ ಬುಕ್​ ನಲ್ಲಿರುವ ಬರುವ ಜಾಹೀರಾತು ಬಗ್ಗೆ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

Follow Us
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More