ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಬೀದಿಯಲ್ಲಿ ನಡೆಯುತ್ತಿದ್ದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗೆ 10 ವರ್ಷದ ಬಾಲಕ ಕಿರುಕುಳ ನೀಡಿದ್ದಾರೆ. ತನಗೆ ಸಣ್ಣ ಬಾಲಕನಿಂದ ಆದ ಕಿರುಕುಳವನ್ನು ನೆನಪಿಸಿಕೊಂಡು ಆ ಯುವತಿ ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಬೆಂಗಳೂರಿನ ಸಾಮಾಜಿಕ ಮಾಧ್ಯಮದ ಇನ್ಫ್ಲುಯೆನ್ಸರ್ ಒಬ್ಬರು ನವೆಂಬರ್ 5ರಂದು ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದ ರಸ್ತೆಯೊಂದರಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ 10 ವರ್ಷದ ಬಾಲಕನಿಂದ ಕಿರುಕುಳ ನೀಡಿದ್ದ. ತನಗಾದ ಕಿರುಕುಳವನ್ನು ವೀಡಿಯೊದಲ್ಲಿ ವಿವರಿಸುತ್ತಾ, ಸೈಕಲ್ ಸವಾರಿ ಮಾಡುವ ಚಿಕ್ಕ ಹುಡುಗ ಆಕೆಯ ಎದುರು ದಿಕ್ಕಿನಿಂದ ಬಂದು ಆಕೆಯ ಎದೆಯನ್ನು ಮುಟ್ಟಿದ್ದಾನೆ. ಇದು ಆಕೆಯ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇನ್ಫ್ಲುಯೆನ್ಸರ್ ನೇಹಾ ಬಿಸ್ವಾಲ್ ಅವರು ಕೆಲಸದಿಂದ ಹಿಂತಿರುಗುವಾಗ ತಮ್ಮ ವ್ಲಾಗ್ಗಾಗಿ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದರು. ಈ ಆಘಾತಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 07, 2024 05:59 PM