ಸೋಷಿಯಲ್ ಮೀಡಿಯಾದಲ್ಲಿ (Social Meda) ಕಾಮಿಡಿ ವಿಡಿಯೋಗಳ (Video) ಮೂಲಕ ವೈರಲ್ ಆಗಿದ್ದ ಚೇತನ್ ದುರ್ಗ ಸಿನಿಮಾ ನಟನೆಗೂ ಕಾಲಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಚೇತನ್ ಇದೀಗ ನಿರೀಕ್ಷೆ ಹುಟ್ಟಿಸಿರುವ ಹಾಸ್ಟೆಲ್ ಹುಡುಗರು (Hostel Hudugaru) ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಭರವಸೆ ಮೂಡಿಸಿದ್ದು ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೂ ದಾಂಗುಡಿ ಇಡಲಿದೆ. ತಮ್ಮ ಹಾಸ್ಟೆಲ್ ಹುಡುಗರು ಸಿನಿಮಾ ಬಗ್ಗೆ, ಸಾಮಾಜಿಕ ಜಾಲತಾಣದಿಂದ ದೊಡ್ಡ ಪರದೆಗೆ ಬಂದ ಜರ್ನಿ ಬಗ್ಗೆ ಚೇತನ್ ದುರ್ಗಾ ಮಾತನಾಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ