ನೆಲಮಂಗಲ: ಶೌಚಾಲಯದ ಕಮೋಡ್ನಲ್ಲಿ ಅವಿತ ನಾಗರಹಾವು; ಬುಸ್ ಬುಸ್ ಶಬ್ದಕ್ಕೆ ಬೆದರಿದ ಮನೆಯೊಡತಿ
ಬೆಂಗಳೂರು ಉತ್ತರ ತಾಲೂಕಿನ ಅಂದ್ರಹಳ್ಳಿಯ ಮನೆಯೊಂದರ ಶೌಚಾಲಯದ ಕಮೋಡ್ನಲ್ಲಿ ನಾಗರಹಾವು ಪತ್ತೆಯಾಗಿದೆ. ನಾಗನ ಬುಸ್ ಬುಸ್ ಶಬ್ದಕ್ಕೆ ಮನೆಯೊಡತಿ ಬೆದರಿದ್ದಾರೆ.
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಅಂದ್ರಹಳ್ಳಿಯ ಮನೆಯೊಂದರ ಶೌಚಾಲಯದ ಕಮೋಡ್ನಲ್ಲಿ ನಾಗರಹಾವು ಪತ್ತೆಯಾಗಿಯಾಗಿದೆ. ಬಾತ್ರೂಮ್ ಕಂ ಶೌಚಾಲಯಕ್ಕೆ ಹೋಗಿದ್ದ ಮನೆಯೊಡತಿಗೆ ಬುಸ್ ಬುಸ್ ಶಬ್ದ ಕೇಳಿಸಿದೆ. ಈ ವೇಳೆ ಮನೆಯೊಡತಿ ಬೆದರಿದ್ದಾರೆ. ಪರಿಶೀಲನೆ ವೇಳೆ ಹಾವು ಇರುವುದು ಪತ್ತೆಯಾಗಿದೆ. ಕೂಡಲೇ ಸ್ನೇಕ್ ನಾಗೇಂದ್ರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಕಮೋಡ್ನಲ್ಲಿ ಅವಿತಿದ್ದ ನಾಗರ ಹಾವನ್ನು ರಕ್ಷಿಸಿ (Cobra Snake Rescue) ಹೆಸರಘಟ್ಟ ಅರಣ್ಯದಲ್ಲಿ ಬಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Jul 11, 2023 07:46 PM
Latest Videos