ಸೊಲ್ಲಾಪುರ: ಈರುಳ್ಳಿ ದರ ದಿಢೀರ್ ಕುಸಿತ; 64 ಉಳ್ಳಾಗಡ್ಡಿ ಚೀಲ ಉಚಿತವಾಗಿ ಹಂಚಿದ ರೈತ
ಈರುಳ್ಳಿ ದರ ದಿಢೀರ್ ಕುಸಿತವಾದ ಹಿನ್ನಲೆ ಆಕ್ರೋಶಗೊಂಡ ರೈತನೊಬ್ಬ ಬರೊಬ್ಬರಿ 64 ಈರುಳ್ಳಿ (Onion) ಚೀಲವನ್ನು ಉಚಿತವಾಗಿ ಹಂಚಿದ ಘಟನೆ ನೆರೆಯ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ(Solapur)ದ ಮಾರುಕಟ್ಟೆಯಲ್ಲಿ ನಡೆದಿದೆ.
ಮಹಾರಾಷ್ಟ್ರ, ಡಿ.19: ಈರುಳ್ಳಿ ದರ ದಿಢೀರ್ ಕುಸಿತವಾದ ಹಿನ್ನಲೆ ಆಕ್ರೋಶಗೊಂಡ ರೈತನೊಬ್ಬ ಬರೊಬ್ಬರಿ 64 ಈರುಳ್ಳಿ (Onion) ಚೀಲವನ್ನು ಉಚಿತವಾಗಿ ಹಂಚಿದ ಘಟನೆ ನೆರೆಯ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ(Solapur)ದ ಮಾರುಕಟ್ಟೆಯಲ್ಲಿ ನಡೆದಿದೆ. ಒಂದು ಚೀಲ ಈರುಳ್ಳಿಗೆ 200 ರೂ. ದರ ಕೇಳಿ ರೈತನಿಗೆ ಶಾಕ್ ಆಗಿದ್ದು, ಈರುಳ್ಳಿ ಚೀಲಗಳ ಮೇಲೆ ನಿಂತು ಉಚಿತ ಉಚಿತ ಈರುಳ್ಳಿ ಉಚಿತ ಎನ್ನುವುದರ ಜೊತೆಗೆ ರೈತನ ಗೋಳು ಯಾರೂ ಕೇಳೋರಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜಮೀನಿನಿಂದ ಮಾರುಕಟ್ಟೆಗೆ ಒಂದು ಚೀಲ ಈರುಳ್ಳಿ ತರಲು 103 ರೂಪಾಯಿ ಖರ್ಚು ಮಾಡಿದ್ದೇನೆ. ನನಗೆ ಒಂದು ಚೀಲ ಈರುಳ್ಳಿಗೆ 200 ರೂಪಾಯಿ ಹೇಳುತ್ತಿದ್ದಾರೆ. ಈರುಳ್ಳಿ ನಾಟಿ ಮಾಡಿ, ಕೊಯ್ಲು ಮಾಡುವವರಿಗೆ ಎಷ್ಟು ಖರ್ಚಾಗಿದೆ ಗೊತ್ತೆ ಎನ್ನುವ ಮೂಲಕ ಅಳಲನ್ನು ತೊಡಿಕೊಂಡಿದ್ದಾರೆ.
ರಾಷ್ಟ್ರದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ