ಜನಾರ್ಧನ ಮತ್ತು ಶ್ರೀರಾಮುಲು ನಡುವೆ ಸೋಮಣ್ಣ ನಿಶ್ಚಿತವಾಗಿ ಸಂಧಾನ ಮಾಡಿಸಲಿದ್ದಾರೆ: ಗಾಲಿ ಸೋಮಶೆಖರ್ ರೆಡ್ಡಿ

Updated on: Jul 16, 2025 | 8:19 PM

ಶ್ರೀರಾಮುಲು ಸಹ ತನಗೆ ತಮ್ಮನಿದ್ದಂತೆ, ತಾವೆಲ್ಲ ಒಟ್ಟಿಗೆ ಬೆಳೆದವರು ಎಂದು ಹೇಳುವ ಸೋಮಶೇಖರ್ ರೆಡ್ಡಿ, ಸೋಮಣ್ಣನವರು ನಡೆಸುವ ರಾಜಿ ಸಂಧಾನ ಶತ ಪ್ರತಿಶತದಷ್ಟು ಸಫಲವಾಗಲಿದೆ ಎಂದರು. ಸೋಮಣ್ಣ ಅವರು ನಡೆಸಲಿರುವ ಸಂಧಾನದ ಬಗ್ಗೆ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಳಿವು ನೀಡಿದ್ದರು ಮತ್ತು ಕೇಂದ್ರ ಸಚಿವನ ಪ್ರಯತ್ನದಲ್ಲಿ ತಾನೂ ಕೈ ಜೋಡಿಸುವುದಾಗಿ ಹೇಳಿದ್ದರು.

ಕೊಪ್ಪಳ, ಜುಲೈ, 16: ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಮತ್ತು ಮಾಜಿ ಶಾಸಕ ಬಿ ಶ್ರೀರಾಮುಲು ಅವರ ನಡುವಿನ ವೈಮನಸ್ಸು, ಜಗಳ, ಮನಸ್ತಾಪ-ಎಲ್ಲವಕ್ಕೂ ಪೂರ್ಣವಿರಾಮ ಬೀಳೋದು ಹೆಚ್ಚು ಕಡಿಮೆ ಖಚಿತವಾಗಿದೆ. ರಾಜಿ ಸಂಧಾನಕ್ಕಾಗಿ ಕೇಂದ್ರ ಸಚಿವ ವಿ ಸೊಮಣ್ಣ ಅವರಿಬ್ಬರನ್ನು ದೆಹಲಿಗೆ ಕರೆದಿದ್ದಾರೆ. ಕೊಪ್ಪಳದಲ್ಲಿ ವಿಷಯವನ್ನು ಕುರಿತು ಮಾತಾಡಿದ ಜನಾರ್ಧನ ರೆಡ್ಡಿ ಸಹೋದರ ಮತ್ತು ಮಾಜಿ ಶಾಸಕ ಜಿ ಸೋಮಶೇಖರ್ ರೆಡ್ಡಿ (G Somashekhar Reddy), ಸಂಧಾನದ ಮಾತುಕತೆಗೆ ಹೋಗಿದ್ದಾರೆಂದರೆ ತಪ್ಪಾಗುತ್ತದೆ, ಜನಾರ್ಧನ ಮತ್ತು ಶ್ರೀರಾಮುಲು ನಡುವೆ ದಶಕಗಳ ದೋಸ್ತಿ ಇದೆ, ಯಾವುದೋ ತಪ್ಪು ಗ್ರಹಿಕೆಯಿಂದ ದೂರವಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:   ರೆಡ್ಡಿ-ಶ್ರೀರಾಮುಲು ವೈಮನಸ್ಸು ಶಮನಕ್ಕಾಗಿ ಸೋಮಣ್ಣ ಪ್ರಯತ್ನ, ನಾನೂ ಕೈ ಜೋಡಿಸುವೆ: ವಿಜಯೇಂದ್ರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ