ಜೆಡಿಎಸ್-ಬಿಜೆಪಿ ಸೋಮಶೇಖರ್ ಗೆ ಬೇಸರ ಮೂಡಿಸಿರಬಹುದು, ಆದರೆ ಅವರು ಪಕ್ಷ ಬಿಡುತ್ತಿಲ್ಲ: ಆರ್ ಅಶೋಕ, ಬಿಜೆಪಿ ಶಾಸಕ

|

Updated on: Oct 06, 2023 | 5:44 PM

ಜೆಡಿಎಸ್ ಪಕ್ಷದೊಂದಿಗೆ ತಮ್ಮ ಪಕ್ಷದ ವರಿಷ್ಠರು ಮೈತ್ರಿ ಮಾಡಿಕೊಂಡಿರುವುದನ್ನು ರಾಜ್ಯದ ಎಲ್ಲ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ, ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ಕಾಂಗ್ರೆಸ್ ಷಕ್ಷ 20 ಸ್ಥಾನ ಗೆಲ್ಲುವುದಾಗಿ ಹೇಳಿಕೊಂಡಿದೆ, ಆದರೆ ಒಂದು ಸ್ಥಾನ ಕೂಡ ಸಿಗಲ್ಲ ಎಂದು ಅಶೋಕ ಆತ್ಮವಿಶ್ವಾಸದಿಂದ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಆರ್ ಅಶೋಕ (R Ashoka), ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಅವರಿಗೆ ಜೆಡಿಎಸ್-ಬಿಜೆಪಿ ಮೈತ್ರಿಯ (BJP-JDS alliance) ಬಗ್ಗೆ ಸ್ವಲ್ಪ ಬೇಸರ ಆಗಿರಬಹುದು ಆದರೆ ಹಾಗಂತ ಅವರ ಪಕ್ಷ ಬಿಟ್ಟ ಕಾಂಗ್ರೆಸ್ ಸೇರುವ ನಿರ್ಧಾರವೇನೂ ಪ್ರಕಟಿಸಿಲ್ಲ ಎಂದು ಹೇಳಿದರು. ಕಡೆದ 4-5 ತಿಂಗಳಿಂದ ಈ ಚರ್ಚೆ ನಡೆಯುತ್ತಿದೆ, ಅಸಲಿಗೆ ಅವರನ್ನು ಬಿಜೆಪಿಗೆ ತಂದಿದ್ದೇ ತಾನು, ತನ್ನ ಮನೆಗೆ ಅವರು ಬಂದಿದ್ದು ನಿಜ ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಹೇಳಲಿಲ್ಲ ಎಂದು ಅಶೋಕ ಹೇಳಿದರು. ಜೆಡಿಎಸ್ ಪಕ್ಷದೊಂದಿಗೆ ತಮ್ಮ ಪಕ್ಷದ ವರಿಷ್ಠರು ಮೈತ್ರಿ ಮಾಡಿಕೊಂಡಿರುವುದನ್ನು ರಾಜ್ಯದ ಎಲ್ಲ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ, ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ಕಾಂಗ್ರೆಸ್ ಷಕ್ಷ 20 ಸ್ಥಾನ ಗೆಲ್ಲುವುದಾಗಿ ಹೇಳಿಕೊಂಡಿದೆ, ಆದರೆ ಒಂದು ಸ್ಥಾನ ಕೂಡ ಸಿಗಲ್ಲ ಎಂದು ಅಶೋಕ ಆತ್ಮವಿಶ್ವಾಸದಿಂದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on