Conductor’s son to be a collector!: ಅಣ್ಣಿಗೇರಿಯ ಬಸ್ ಕಂಡಕ್ಟರ್ ಮಗ ಆಗಲಿದ್ದಾನೆ ಜಿಲ್ಲಾ ಕಲೆಕ್ಟರ್! ಸಿದ್ದಲಿಂಗಪ್ಪಗೆ ಯುಪಿಎಸ್​ಸಿ-2023 ಪರೀಕ್ಷೆಯಲ್ಲಿ 589 ರ‍್ಯಾಂಕ್!!

ಅರುಣ್​ ಕುಮಾರ್​ ಬೆಳ್ಳಿ

Updated on: May 23, 2023 | 7:04 PM

ಸಿದ್ದಲಿಂಗಪ್ಪ ಯುಪಿಎಸ್ 2023 ಪರೀಕ್ಷೆಯಲ್ಲಿ 589ನೇ ರ‍್ಯಾಂಕ್ ಪಡೆದು ಕೇವಲ ಹೆತ್ತವರಿಗೆ ಮಾತ್ರವಲ್ಲ ಸಮಸ್ತ ಕನ್ನಡಿಗರಿಗೆ ಹೆಮ್ಮೆ ಉಂಟುಮಾಡಿದ್ದಾರೆ.

ಧಾರವಾಡ: ಇದಪ್ಪಾ ಸಾಧನೆ ಅಂದ್ರೆ! ಭಾರತೀಯ ಆಡಳಿತಾತ್ಮಕ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆಗಳಿಗಾಗಿ (IPS) ಕೇಂದ್ರ ಲೋಕ ಸೇವಾ ಆಯೋಗ ನಡೆಸುವ (UPSC) ಪರೀಕ್ಷೆಗಳು ಬಹಳ ಕಠಿಣವಾಗಿರುತ್ತವೆ ಮತ್ತು ಕೇವಲ ಅಸಾಮಾನ್ಯ ಬುದ್ಧಿವಂತರು ಮಾತ್ರ ಅವುಗಳನ್ನು ಕ್ಲೀಯರ್ ಮಾಡುತ್ತಾರೆ. ಧಾರವಾಡದ ಅಣ್ಣುಗೇರಿ ಪಟ್ಟಣದ ಯುವಕ ಸಿದ್ದಲಿಂಗಪ್ಪ ಕೆ ಪೂಜಾರ್ ಆ ಸಾಧನೆ ಮಾಡಿದ್ದಾರೆ. ಇವರ ತಂದೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್. ಮನೆಯ ಸ್ಥಿತಿ, ಹಣಕಾಸಿನ ನಿರ್ಬಂಧಗಳು, ಕೋಚಿಂಗ್ ಕೊರತೆ ಮೊದಲಾದ ಯಾವುದೇ ಅಂಶ ಸಿದ್ದಲಿಂಗಪ್ಪಗೆ ಯುಪಿಎಸ್ ಸಿ ಪರೀಕ್ಷೆ ಪಾಸಾಗಲು ಅಡ್ಡಿಯಾಗಲಿಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿರುವ ಅವರು ಯುಪಿಎಸ್ 2023 ಪರೀಕ್ಷೆಯಲ್ಲಿ 589ನೇ ರ‍್ಯಾಂಕ್ ಪಡೆದು ಕೇವಲ ಹೆತ್ತವರಿಗೆ ಮಾತ್ರವಲ್ಲ ಸಮಸ್ತ ಕನ್ನಡಿಗರಿಗೆ ಹೆಮ್ಮೆ ಉಂಟುಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.