ತ್ಯಾಗ ಮಾಡಿ ಎಲ್ಲರ ಎದುರು ಹೀರೋ ಆದ ಸೂರಜ್; ನಾಯಕತ್ವ ಎಂದರೆ ಇದು
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸೂರಜ್ ಸಿಂಗ್ ಅವರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಅವರು ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಈಗ ನಾಯಕತ್ವದ ಮೂಲಕ ಎಲ್ಲರ ಗಮನ ಸೆಳೆದರು. ಅವರ ಆಟ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಪ್ರೋಮೋ ಗಮನ ಸೆಳೆದಿದೆ.
‘ಬಿಗ್ ಬಾಸ್’ ಆಟದಲ್ಲಿ ಯಾರೂ ತ್ಯಾಗ ಮಾಡೋಕೆ ರೆಡಿ ಇರುವುದಿಲ್ಲ. ಆದರೆ, ಕೆಲವರು ಆ ರೀತಿ ಅಲ್ಲ. ಆಟಕ್ಕಿಂತ ಮಾನವೀಯತೆ ಮುಖ್ಯ ಎಂದು ತ್ಯಾಗ ಮಾಡಲು ರೆಡಿ ಇರುತ್ತಾರೆ. ಇದಕ್ಕೆ ಹೊಸ ಉದಾಹರಣೆ ಸೂರಜ್ ಸಿಂಗ್. ಅವರು ಒಂದು ತಂಡದ ನಾಯಕ ಆಗಿದ್ದರು. ತಂಡ ಗೆಲ್ಲಲಿ ಅಥವಾ ಬಿಡಲಿ ತಂಡದ ನಾಯಕನಾಗಿದ್ದರಿಂದ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗುವ ಅವಕಾಶವನ್ನು ಬಿಗ್ ಬಾಸ್ ನೀಡಿದರು. ಹೀಗೆ ಮಾಡಿದರೆ ತಂಡದ ಉಳಿದ ಸದಸ್ಯರು ಕ್ಯಾಪ್ಟನ್ಸಿ ರೇಸ್ನಿಂದ ಹಿಂದೆ ಸರಿಯಬೇಕಾಗುತ್ತದೆ. ಆದರೆ, ಇದನ್ನು ಸೂರಜ್ ಬೇಡ ಎಂದಿದ್ದಾರೆ. ಇದರಿಂದ ಅವರು ರಿಯಲ್ ಹೀರೋ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 23, 2025 09:50 AM
Latest Videos

